ಶಿವಮೊಗ್ಗ: ಜಿಲ್ಲೆಯ ಸಾಗರದಲ್ಲಿ ಬೈಕ್ ವೀಲ್ಹಿಂಗ್ ಮಾಡೋರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಹೀಗೆ ಮಾಡಿದಂತ ಮೂವರು ಅಪ್ರಾಪ್ತನ ವಿರುದ್ಧ ಎಫ್ಐಆರ್ ಕೂಡ ದಾಖಲಿಸಲಾಗಿದೆ.
ಈ ಬಗ್ಗೆ ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್ ಮಾಹಿತಿ ಹಂಚಿಕೊಂಡಿದ್ದು, ಸಾಗರ ನಗರದ ಹೆಲಿಪ್ಯಾಡ್ ಬಳಿಯಲ್ಲಿ ಬೈಕ್ ವೀಲ್ಹಿಂಗ್ ನಲ್ಲಿ ತೊಡಗಿದ್ದಂತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಪೊಲೀಸರು ತನಿಖೆ ನಡೆಸಿ ಮೂವರು ಅಪ್ರಾಪ್ತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.
ಇನ್ನೂ ಅಪ್ರಾಪ್ತ ಬಾಲಕರಿಗೆ ಬೈಕ್ ಚಾಲನೆಗೆ ನೀಡುವುದು ಕಾನೂನಿನಡಿ ಅಪರಾಧವಾಗಿದೆ. ಈ ಕಾರಣದಿಂದಾಗಿ ಬಾಲಕರ ಪೋಷಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಮೂವರು ಅಪ್ರಾಪ್ತ ಬಾಲಕರು, ಪೋಷಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ವರದಿ ನೀಡುವುದಾಗಿ ಮಾಹಿತಿ ನೀಡಿದ್ದಾರೆ.
ಸೋ ಸಾಗರ ತಾಲ್ಲೂಕಿನ ಜನರೇ ಎಚ್ಚೆತ್ತು ಕೊಳ್ಳಿ. ಅಪ್ರಾಪ್ತರ ಕೈಗೆ ಬೈಕ್ ನೀಡಿ, ಅಪರಾಧ ಚಟುವಟಿಕೆ, ಅಪಘಾತ, ಈ ರೀತಿಯ ಬೈಕ್ ವೀಲ್ಹಿಂಗ್ ನಂತಹ ಪ್ರಕರಣ ದಾಖಲಾದಾಗ, ನಿಮ್ಮ ವಿರುದ್ಧವೂ ಕೇಸ್ ಬುಕ್ ಆಗಲಿದೆ. ಹೀಗಾಗಿ ಅಪ್ರಾಪ್ತರಿಗೆ ಬೈಕ್ ಚಲಾಯಿಸಲು ಕೊಡಬೇಡಿ ಅಂತ ಪೊಲೀಸ್ ಇಲಾಖೆಯ ಮನವಿ ಕೂಡ ಆಗಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BREAKING: ಕರ್ನಾಟಕದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ‘ಓಂ ಪ್ರಕಾಶ್’ ಕಗ್ಗೊಲೆ | Om Prakash IPS
BIG NEWS: ಎಲ್ಲಾ ಪೌರ ಕಾರ್ಮಿಕರನ್ನು ಖಾಯಂ, ಗುತ್ತಿಗೆ ನೌಕರರಿಗೆ ಕನಿಷ್ಠ ವೇತನ: ಸಿಎಂ ಸಿದ್ದರಾಮಯ್ಯ ಘೋಷಣೆ