ಕೆಎನ್ಎನ್ಡಿಜಿಟಲ್ ಡೆಸ್ಕ್ : ಅನೇಕರು ಚರ್ಮದ ಮೇಲೆ ತುರಿಕೆ, ಸುಡುವಿಕೆ, ದದ್ದುಗಳಂತಹ ಸಮಸ್ಯೆಗಳನ್ನ ಸಾಮಾನ್ಯವಾಗಿ ನಿರ್ಲಕ್ಷಿಸುತ್ತಾರೆ. ಆದ್ರೆ, ಕೆಲವೊಮ್ಮೆ ಈ ಸಮಸ್ಯೆಗಳು ಕೆಲವು ಕಾಯಿಲೆಗಳ ಸಂಕೇತವಾಗಿದೆ. ಲಿವರ್’ಗೆ ಸಂಬಂಧಿಸಿದ ಸಮಸ್ಯೆಗಳಲ್ಲೂ ಇದೇ ಲಕ್ಷಣಗಳು ಕಂಡು ಬರುತ್ತವೆ ಎನ್ನುತ್ತಾರೆ ತಜ್ಞರು. ಪಿತ್ತಜನಕಾಂಗದ ಹಾನಿಯ ಲಕ್ಷಣವೆಂದ್ರೆ, ರಕ್ತದಲ್ಲಿ ಪಿತ್ತರಸದ ರಚನೆ. ಇಂತಹ ಪರಿಸ್ಥಿತಿಯಲ್ಲಿ ಚರ್ಮದ ತುರಿಕೆ ಸಮಸ್ಯೆ ಪ್ರಾರಂಭವಾಗುತ್ತದೆ. ಯಕೃತ್ತು ಅಸಮರ್ಪಕವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದಾಗ ಪಿತ್ತರಸವು ರಕ್ತದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಇದರಿಂದ ತುರಿಕೆ ಸಮಸ್ಯೆ ಉಂಟಾಗುತ್ತದೆ. ಕಣ್ಣುಗಳು, ಚರ್ಮ ಮತ್ತು ಉಗುರುಗಳು ಹಳದಿಯಾಗುವುದು ಸಹ ಯಕೃತ್ತಿನ ಕಾಯಿಲೆಯ ಲಕ್ಷಣವಾಗಿದೆ. ಹಳದಿ ಬಣ್ಣದ ಮೂತ್ರವು ಯಕೃತ್ತಿನ ಅಪಸಾಮಾನ್ಯ ಕ್ರಿಯೆಯನ್ನ ಸೂಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಈಸ್ಟ್ರೊಜೆನ್ ಮಟ್ಟವು ಹೆಚ್ಚಾಗುತ್ತದೆ. ಇದರಿಂದ ದೇಹದಲ್ಲಿ ಟೈರೋನೇಸ್ ಎಂಬ ಅಂಶ ಹೆಚ್ಚುತ್ತದೆ. ಆದ್ದರಿಂದ ಚರ್ಮದ ಮೇಲೆ ಕಂದು ಅಥವಾ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಚರ್ಮದ ಮೇಲೆ ಇಂತಹ ಸಮಸ್ಯೆಗಳನ್ನ ನಿರ್ಲಕ್ಷಿಸಬೇಡಿ. ದೇಹದಲ್ಲಿ ಈಸ್ಟ್ರೊಜೆನ್ ಮಟ್ಟಗಳು ಹೆಚ್ಚಾದಾಗ ಚರ್ಮದ ಮೇಲೆ ಸಣ್ಣ ಜೇಡರ ಬಲೆ ತರಹದ ಜೀವಕೋಶಗಳು ಕಾಣಿಸಿಕೊಳ್ಳುತ್ತವೆ. ಇವುಗಳನ್ನ ಸ್ಪೈಡರ್ ಆಂಜಿಯೋಮಾಸ್ ಎಂದು ಕರೆಯಲಾಗುತ್ತದೆ. ಇದು ವ್ಯಕ್ತಿಯ ಯಕೃತ್ತು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದರ ಸಂಕೇತವಾಗಿದೆ.
ಇನ್ನು ಚರ್ಮದ ಮೇಲೆ ನೀಲಿ ದದ್ದು ಹೆಚ್ಚಾಗಿ ಕಾಣಿಸಿಕೊಂಡ್ರೆ ಯಾರೂ ಅದನ್ನ ಸರಿಯಾಗಿ ಗಮನಿಸುವುದಿಲ್ಲ. ಆದ್ರೆ, ಇದು ಯಕೃತ್ತಿನ ಸಮಸ್ಯೆ. ನಿಮ್ಮ ಯಕೃತ್ತು ಪ್ರೋಟೀನ್ಗಳನ್ನ ಉತ್ಪಾದಿಸುತ್ತಿಲ್ಲ ಎಂಬ ಸೂಚನೆ. ಅಂಗೈಯಲ್ಲಿ ಆಗಾಗ್ಗೆ ಉರಿ ಮತ್ತು ತುರಿಕೆ ಉಂಟಾಗುತ್ತದೆ ಅಂದ್ರೆ, ನಿಮ್ಮ ದೇಹದಲ್ಲಿನ ಹಾರ್ಮೋನುಗಳು ಅಸಮತೋಲನಗೊಂಡಿವೆ. ಇವು ಯಕೃತ್ತಿನ ವೈಫಲ್ಯವನ್ನ ಸೂಚಿಸುತ್ತವೆ. ಇನ್ನು ಹೊಟ್ಟೆಯ ಕೆಳಭಾಗದಲ್ಲಿ ಊತ ಕೂಡ ಯಕೃತ್ತಿನ ವೈಫಲ್ಯದ ಸಂಕೇತವಾಗಿದೆ. ಈ ರೋಗ ಲಕ್ಷಣವನ್ನ ನಿರ್ಲಕ್ಷಿಸುವ ತಪ್ಪನ್ನ ಮಾಡಬೇಡಿ ಮತ್ತು ತಕ್ಷಣ ತಜ್ಞರನ್ನ ಸಂಪರ್ಕಿಸಿ.
Good News: ರಾಜ್ಯದಲ್ಲಿನ 33 ಸಾವಿರ ಸಂಘಗಳಿಗ 5 ಲಕ್ಣ ರೂ ಸಹಾಯಧನ – ಸಿಎಂ ಬೊಮ್ಮಾಯಿ ಘೋಷಣೆ
ಶಿವಮೊಗ್ಗ: ಸಾಗರ ಗ್ರಾಮಾಂತರ ಪೊಲೀಸರ ಭರ್ಜರಿ ಕಾರ್ಯಾಚರಣೆ: ಮೂವರು ಅಡಿಕೆ ಕಳ್ಳರ ಬಂಧನ, 1.42 ಕೋಟಿ ಮಾಲು ಜಪ್ತಿ
SHOCKING NEWS : ನಾಲ್ವರು ಯುವತಿಯರಿಂದ ಯುವಕನ ಅಪಹರಣ, ಬಲವಂತವಾಗಿ ಮದ್ಯ ಕುಡಿಸಿ, ಲೈಂಗಿಕ ದೌರ್ಜನ್ಯ