ಕೆಎನ್ಎನ್ ಡಿಜಿಟಲ್ ಡೆಸ್ಕ್ : ಆಧುನಿಕ ಜೀವನಶೈಲಿಗೆ ಒಗ್ಗಿಕೊಂಡ ಜನರು ಗ್ಯಾಸ್ ಬಳಕೆ ಮಾಡದವರೇ ಇಲ್ಲ. ಈಗಿನ ದಿನಗಳಲ್ಲಿ ಗ್ಯಾಸ್ ಬಳಸೋದು ಸುಲಭ ಅನ್ನೋರೆ ಹೆಚ್ಚು. ಆದರೆ ಎಚ್ಟು ಉತ್ತಮೋ ಅಷ್ಟೇ ಅಪಾಯವೂ ಇದೆ. ಹಾಗಾಗಿ ಮನೆಯಲ್ಲಿ ಗ್ಯಾಸ್ ಇರೋದು ಮುಖ್ಯವಲ್ಲ. ಗ್ಯಾಸ್ ಸೋರಿಕೆ ಬಗ್ಗೆ ನಾವು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು. ಅಪ್ಪಿ ತಪ್ಪಿ ಸೋರಿಕೆ ಆಗುತ್ತಿದ್ದರೆ, ಅದಕ್ಕಾಗಿ ನೀವು ಈ ಕೆಳಗಿನ ಟಿಪ್ಸ್ ಗೊತ್ತಿದ್ದರೇ ಬಹುದೊಡ್ಡ ಅನಾಹುತವನ್ನುತಪ್ಪಿಸಬಹುದು
HEALTH TIPS: ಪ್ರತಿನಿತ್ಯ ಹೆಚ್ಚು ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಅಪಾಯ…! ತಜ್ಞರ ಸಲಹೆ
ಗ್ಯಾಸ್ ಸೋರಿಕೆಯಾದಾಗ ಏನ್ ಮಾಡಬೇಕು ಗೊತ್ತಾ?
* ಹುತ್ತಿ ಉರಿಯುತ್ತಿರುವಂತೆ ಕಾಣುವ ಯಾವುದೇ ವಸ್ತುವನ್ನು ಮೊದಲು ನೀರು ಹಾಕಿ ನಂದಿಸುವುದು. ಒಂದು ವೇಳೆ ನಿಮ್ಮ ಮನೆಯಲ್ಲಿ ಎಲ್ಪಿಜಿ ಗ್ಯಾಸ್ ನಿಂದ ಬೆಂಕಿ ಹೊರಬರುತ್ತಿದ್ದರೆ, ಮೊದಲು ಗ್ಯಾಸ್ ಸ್ಟವ್ ಆಫ್ ಮಾಡಿ.
* ಆದಷ್ಟು ಬೇಗನೆ ಗ್ಯಾಸ್ ಸಿಲಿಂಡರ್ ರೆಗುಲೇಟರ್ ಅನ್ನು ಆಫ್ ಮಾಡಿ. ಸಿಲಿಂಡರ್ ಭಾಗದಲ್ಲಿ ಸೇಫ್ಟಿ ಕ್ಯಾಪ್ ಕ್ಲೋಸ್ ಮಾಡಿ.
* ಈ ಸಂದರ್ಭದಲ್ಲಿ ನಿಮ್ಮ ಮನೆಯಲ್ಲಿ ಯಾವುದೇ ಲೈಟ್ ಫ್ಯಾನ್ ಸ್ವಿಚ್ ಆನ್ ಮಾಡುವುದು ಅಥವಾ ಆಫ್ ಮಾಡುವುದು ಮಾಡಬೇಡಿ.
* ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಈ ಸಮಯದಲ್ಲಿ ಬಳಸಬೇಡಿ. ಏಕೆಂದರೆ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಜಾಸ್ತಿ ಹೊತ್ತಿಕೊಳ್ಳುವ ಸಾಧ್ಯತೆ ಇರುತ್ತದೆ.
* ಬೆಂಕಿಕಡ್ಡಿ ಗೀರುವುದು, ಸಿಗರೇಟ್ ಲೈಟರ್ ಹಚ್ಚುವುದು, ಸಿಗರೇಟ್ ಸೇದುವುದು ಇವೆಲ್ಲ ಮಾಡಲೇಬೇಡಿ. ಇದರಿಂದ ನೀವಾಗಿಯೇ ಅಪಾಯವನ್ನು ತಂದುಕೊಂಡಂತೆ ಆಗುತ್ತದೆ.
HEALTH TIPS: ಪ್ರತಿನಿತ್ಯ ಹೆಚ್ಚು ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಅಪಾಯ…! ತಜ್ಞರ ಸಲಹೆ
* ನಿಮ್ಮ ಮನೆಯ ಎಲ್ಲಾ ಕಿಟಕಿ ಹಾಗೂ ಬಾಗಿಲುಗಳನ್ನು ಸಂಪೂರ್ಣವಾಗಿ ತೆರೆದು ಬಿಡಿ. ಇದರಿಂದ ಮನೆಯೊಳಗೆ ಗಾಳಿ ಹೆಚ್ಚು ಓಡಾಡಿ ಸೋರಿಕೆ ಆಗುತ್ತಿರುವ ಗ್ಯಾಸ್ ಹೊರಹೋಗಲು ಮತ್ತು ಕಡಿಮೆಯಾಗಲು ಸಹಾಯವಾಗುತ್ತದೆ. ಇದರಿಂದ ಬ್ಲಾಸ್ಟ್ ಆಗುವ ಅಪಾಯ ತೀರಾ ಕಡಿಮೆಯಾಗುತ್ತದೆ.
* ನಿಮ್ಮ ಮನೆಯ ಮೈನ್ ಎಲೆಕ್ಟ್ರಿಕ್ ಬೋರ್ಡ್ ಸ್ವಿಚ್ ಆಫ್ ಮಾಡಿ. ಅಂದರೆ ಮನೆಗೆ ಬರುತ್ತಿರುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ.
* ನಿಮ್ಮ ಏಜೆನ್ಸಿ ಅಥವಾ ಗ್ಯಾಸ್ ಸಪ್ಲೇಯರ್ ಗೆ ತಕ್ಷಣ ವಿಷಯ ತಿಳಿಸಿ. extinguisher ನಿಂದ ಸಾಧ್ಯವಾದಷ್ಟು ಬೆಂಕಿ ಆರಿಸಿ.
ಗ್ಯಾಸ್ ಸೋರಿಕೆಯಿಂದ ಗಾಯವಾದ್ರೆ ಏನ್ ಮಾಡ್ಬೇಕು ಗೊತ್ತಾ?
* ಮನೆಯಲ್ಲಿ ಯಾರಾದರೂ ವ್ಯಕ್ತಿ ಈಗಾಗಲೇ ಸೋರಿಕೆಯಾದ ಗ್ಯಾಸ್ ಸೇವನೆ ಮಾಡಿದ್ದರೆ ಮತ್ತು ಉಸಿರಾಡಲು ಕಷ್ಟಪಡುತ್ತಿದ್ದರೆ, ಮೊದಲು ಅವರನ್ನು ಮನೆಯ ಹೊರಗೆ ಕರೆತನ್ನಿ.
* ಅವರಿಗೆ ಸಾಧ್ಯವಾದಷ್ಟು ತಾಜಾ ಗಾಳಿ ಸಿಗುವಂತೆ ಮಾಡಿ. ಅವರನ್ನು ಆರಾಮವಾಗಿ ಕೂರಿಸಿ ಸಾಧ್ಯವಾದರೆ ಕೃತಕ ಉಸಿರಾಟ ವ್ಯವಸ್ಥೆಯನ್ನು ಏರ್ಪಡಿಸಿ.
* ಚರ್ಮದ ಮೇಲೆ ಒಂದು ವೇಳೆ ಗ್ಯಾಸ್ ನಿಂದ ಸುಟ್ಟ ಗಾಯಗಳು ಉಂಟಾಗಿದ್ದರೆ, ಅಲ್ಲಿನ ಭಾಗದ ಬಟ್ಟೆಯನ್ನು ತೆಗೆದು ಮೊದಲು ಗಾಯದ ಮೇಲೆ ತಣ್ಣೀರು ಸುರಿಯಿರಿ.
* ಗಾಯ ಆದಂತಹ ವ್ಯಕ್ತಿಯನ್ನು ಮೊದಲು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ.
HEALTH TIPS: ಪ್ರತಿನಿತ್ಯ ಹೆಚ್ಚು ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಅಪಾಯ…! ತಜ್ಞರ ಸಲಹೆ
ಮನೆಯಲ್ಲಿ ಸಿಲಿಂಡರ್ ಹೇಗೆ ಇರಿಸಬೇಕು?
* ಯಾವಾಗಲೂ ಸಿಲಿಂಡರ್ ಅನ್ನು ನಿಂತಿರುವಂತೆ ಇಡಬೇಕು. ಅದನ್ನು ಮಲಗಿಸುವುದು ಅಥವಾ ಉಲ್ಟಾ ಮಾಡುವುದು ಬೇಡ.
ಮುನ್ನೆಚ್ಚರಿಕೆ ಕ್ರಮಗಳು ಏನು ?
* ಸಿಲಿಂಡರ್ ನಿಂದ ಗ್ಯಾಸ್ ಸ್ಟವ್ ಭಾಗಕ್ಕೆ ಇರುವಂತಹ ಗ್ಯಾಸ್ ಪೈಪ್ ಅನ್ನು ಆಗಾಗ ಚೆಕ್ ಮಾಡಿ. ಒಂದು ವೇಳೆ ಹಾಳಾಗಿದ್ದರೆ ಅದನ್ನು ಒಂದು ವರ್ಷದ ಒಳಗಡೆ ರಿಪ್ಲೇಸ್ ಮಾಡಿ.
ಗ್ಯಾಸ್ ನಿಂದ ಕಣ್ಣಿಗೆ ಹಾನಿಯಾದ್ರೆ, ಏನು ಮಾಡಬೇಕು ಗೊತ್ತಾ?
* ತಂಪಾದ ಹಾಗೂ ಶುದ್ಧವಾದ ನೀರಿನಿಂದ ಕಣ್ಣುಗಳನ್ನು ತೊಳೆದುಕೊಂಡು ವೈದ್ಯಕೀಯ ನೆರವನ್ನು ಪಡೆದುಕೊಳ್ಳಿ.
HEALTH TIPS: ಪ್ರತಿನಿತ್ಯ ಹೆಚ್ಚು ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಅಪಾಯ…! ತಜ್ಞರ ಸಲಹೆ