ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗಾಳಿ, ಮಳೆ ಬಂದ್ರೆ ಸಾಕು ಮರಗಳು ಧರೆಗುರುಳಿ ವಿದ್ಯುತ್ ಕಂಬಗಳು ಮುರಿದು ಬೀಳೋದು, ವೈಯರ್ ಕಟ್ಟಾಗೋದು ಕಾಮನ್ ಆಗಿಬಿಟ್ಟಿದೆ. ಕೆಲವೊಮ್ಮ ಬೆಸ್ಕಾಂನಿಂದ ತಕ್ಷಣವೇ ಸರಿ ಪಡಿಸೋ ಕೆಲಸವಾದ್ರೇ, ಮತ್ತೆ ಕೆಲವೊಮ್ಮೆ ಲೇಟ್ ಆಗುತ್ತಿತ್ತು. ಆದ್ರೇ ಈಗ ಈ ಸಮಸ್ಯೆ ಸರಿಪಡಿಸೋ ನಿಟ್ಟಿನಲ್ಲಿ ಬೆಂಗಳೂರು ವ್ಯಾಪ್ತಿಗೆ ಸೀಮಿತವಾಗಿ ಗ್ರಾಹಕರಿಗೆ ವಾಟ್ಸ್ ಆಪ್, ಎಸ್ಎಂಎಸ್ ಸಂಖ್ಯೆಯನ್ನು ಬಿಡುಗಡೆ ಮಾಡಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬೆಸ್ಕಾಂ ಮಾಹಿತಿ ನೀಡಿದ್ದು, ಬೆಸ್ಕಾಂ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಗಾಳಿ-ಮಳೆಗೆ ವಿದ್ಯುತ್ ಕಂಬಗಳು ಮುರಿದು, ವಿದ್ಯುತ್ ಮೂಲ ಸೌಕರ್ಯಗಳು ಹಾನಿಗೊಳಗಾಗಿವೆ. ಹೀಗಾಗಿ ಬೆಸ್ಕಾಂ ಸಹಾಯವಾಣಿ 1912ಗೆ ದೂರುಗಳು ಹರಿದು ಬಂದಿದ್ದು, ಕರೆಗಳ ಒತ್ತಡದಿಂದಾಗಿ ಗ್ರಾಹಕರಿಗೆ 1912 ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ.
ಮಳೆಗಾಲದಲ್ಲಿ ಗ್ರಾಹಕರ ವಿದ್ಯುತ್ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ ಗ್ರಾಹಕರಿಗೆ ಈ ಕೆಳಕಂಡ ಪಯಾರ್ಯ ವಾಟ್ಸ್ ಆಪ್ ಸಂಖ್ಯೆಗಳನ್ನು ನೀಡಲಾಗಿದೆ ಎಂದು ತಿಳಿಸಿದೆ.
ವಾಟ್ಸ್‌ಪ್ ಸಂಖ್ಯೆಗಳಿಗೆ ಗ್ರಾಹಕರು ಸಂದೇಶ ಹಾಗೂ ಛಾಯಚಿತ್ರಗಳನ್ನು ತಮ್ಮ ವಿಳಾಸದೊಂದಿಗೆ ಕಳುಹಿಸಿ ತಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದಾಗಿದೆ. ಜೊತೆಗೆ ಎಸ್ ಎಂಎಸ್ ಗಳನ್ನು ಕಳುಹಿಸಲು ಬೆಸ್ಕಾಂ ಬೆಂಗಳೂರು ಮಹಾನಗರ ವ್ಯಾಪ್ತಿಯ ಗ್ರಾಹಕರಿಗೆ 12 ಮೊಬೈಲ್ ಸಂಖ್ಯೆಗಳನ್ನು ಕೂಡ ಒದಗಿಸಲಾಗಿದೆ ಎಂದು ಹೇಳಿದೆ.
ಜಿಲ್ಲಾವಾರು ವಾಟ್ಸ್ ಆಪ್ ಸಂಖ್ಯೆಗಳು
- ಬೆಂಗಳೂರು ಪೂರ್ವ- 8277884013
- ಬೆಂಗಳೂರು ಪಶ್ಚಿಮ- 8277884012
- ಬೆಂಗಳೂರು ಉತ್ತರ- 8277884014
- ಬೆಂಗಳೂರು ದಕ್ಷಿಣ- 8277884011
- ಕೋಲಾರ- 8277884015
- ಚಿಕ್ಕಬಳ್ಳಾಪುರ- 8277884016
- ಬೆಂಗಳೂರು ಗ್ರಾಮಾಂತರ- 8277884017
- ರಾಮನಗರ- 8277884018
- ತುಮಕೂರು- 8277884019
- ಚಿತ್ರದುರ್ಗ- 8277884020
- ದಾವಣಗೆರೆ- 8277884021.
ಸುರಕ್ಷತೆ ಸಂಬಂಧಿಸಿದ ದೂರುಗಳಿಗೆ ವಾಟ್ಸ್ ಆಪ್ ಸಂಖ್ಯೆ – 9483191212, 9483191222 ಮತ್ತು ಬೆಸ್ಕಾಂ ಸಾಮಾನ್ಯ ವಾಟ್ಸ್ ಆಪ್ ಸಂಖ್ಯೆ- 9449844640.
ಈ ಕೆಳಗಿನ ಮೊಬೈಲ್ ಸಂಖ್ಯೆಗಳು– ಕೇವಲ ಎಸ್‌ಎಂಎಸ್ ಗಳಿಗೆ ಮಾತ್ರ:
9480816108, 9480816109, 9480816110, 9480816111, 9480816112, 9480816113, 9480816114, 9480816115, 9480816116, 9480816117, 9480816118 ಮತ್ತು 9480816119.
ಮೋಸದ ಜಾಹೀರಾತುಗಳಿಗೆ ಸೆಲೆಬ್ರಿಟಿಗಳು, ಪ್ರಭಾವಶಾಲಿಗಳು ಸಮಾನವಾಗಿ ಜವಾಬ್ದಾರರು: ಸುಪ್ರೀಂ ಕೋರ್ಟ್
ಯೋಗೀಶ್ ಗೌಡ ಕೊಲೆ ಕೇಸ್ : ಶಾಸಕ ವಿನಯ್ ಕುಲಕರ್ಣಿಗೆ ಮತದಾನಕ್ಕೆ ಅನುಮತಿ ನೀಡಿದ ಹೈಕೋರ್ಟ್
ಬೆಂಗಳೂರಲ್ಲಿ ಮಳೆಯಿಂದ ತೊಂದ್ರೆ ಆಗದಂತೆ ಕ್ರಮವಹಿಸಿ: ಅಧಿಕಾರಿಗಳಿಗೆ ತುಷಾರ್ ಗಿರಿನಾಥ್ ಸೂಚನೆ