ಬರ್ಲಿನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಜರ್ಮನಿಯ ನೂತನ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್ ನಡುವಿನ ರಾಜತಾಂತ್ರಿಕ ಸಂಘರ್ಷ ಈಗ ಹೊಸ ತಿರುವು ಪಡೆದಿದೆ. ಜರ್ಮನಿಯಿಂದ ಸುಮಾರು 5,000 ಅಮೆರಿಕನ್ ಸೈನಿಕರನ್ನು ವಾಪಸ್ ಕರೆಯಿಸಿಕೊಳ್ಳಲು ಟ್ರಂಪ್ ಆದೇಶಿಸಿದ್ದಾರೆ. ಇದು ಯುರೋಪ್ ರಾಷ್ಟ್ರಗಳಲ್ಲಿ ಸಂಚಲನ ಮೂಡಿಸಿದೆ.
ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಜರ್ಮನಿಯ ಚಾನ್ಸಲರ್ ಮೆರ್ಜ್ ನಡುವೆ ರಕ್ಷಣಾ ವೆಚ್ಚ ಮತ್ತು ನ್ಯಾಟೋ (NATO) ವಿಚಾರವಾಗಿ ತೀವ್ರ ವಾಗ್ಸಮರ ನಡೆದಿತ್ತು. ಅಮೆರಿಕದ ‘ಸಹಾಯ’ವನ್ನು ಜರ್ಮನಿ ಲಘುವಾಗಿ ಪರಿಗಣಿಸುತ್ತಿದೆ ಎಂದು ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಜಗಳದ ಬೆನ್ನಲ್ಲೇ ಜರ್ಮನಿಯಲ್ಲಿ ಬೀಡುಬಿಟ್ಟಿದ್ದ ಅಮೆರಿಕದ ಬೃಹತ್ ಸೇನಾ ಪಡೆಯಲ್ಲಿ 5,000 ಸೈನಿಕರನ್ನು ಹಿಂಪಡೆಯುವ ಮೂಲಕ ಟ್ರಂಪ್ ಕಠಿಣ ಸಂದೇಶ ರವಾನಿಸಿದ್ದಾರೆ.








