ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ವಲಯ ಆಯುಕ್ತ ಜಯರಾಮ್ ರಾಯಪುರ ತಿಳಿಸಿದ್ದಾರೆ.
BREAKING NEWS : ಡಿಸೆಂಬರ್ ನಲ್ಲಿ ಅದ್ದೂರಿ ‘ಹೊಯ್ಸಳೋತ್ಸವ’ ಆಚರಣೆ : ಸಿಎಂ ಬೊಮ್ಮಾಯಿ ಘೋಷಣೆ
ದಕ್ಷಿಣ ವಲಯ ವ್ಯಾಪ್ತಿಯ ಒಟ್ಟು 6 ವಿಧಾನಸಭಾ ಕ್ಷೇತ್ರಗಳಾದ ಜಯನಗರ, ಬಿಟಿಎಂ ಲೇಔಟ್, ಪದ್ಮನಾಭನಗರ, ಬಸವನಗುಡಿ, ವಿಜಯನಗರ ಹಾಗು ಚಿಕ್ಕಪೇಟೆಗಳಲ್ಲಿ 48 ಹೊಸ ವಾರ್ಡ್ಗಳಿವೆ. ಈ ವಾರ್ಡ್ಗಳ ವ್ಯಾಪ್ತಿಯಲ್ಲಿರುವ ಎಲ್ಲಾ ಆರ್ಟೀರಿಯಲ್, ಸಬ್-ಆರ್ಟೀರಿಯಲ್ ಮತ್ತು ವಾರ್ಡ್ ರಸ್ತೆಗಳಲ್ಲಿದ್ದ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದಿದ್ದಾರೆ.
BREAKING NEWS : ಡಿಸೆಂಬರ್ ನಲ್ಲಿ ಅದ್ದೂರಿ ‘ಹೊಯ್ಸಳೋತ್ಸವ’ ಆಚರಣೆ : ಸಿಎಂ ಬೊಮ್ಮಾಯಿ ಘೋಷಣೆ
ದಕ್ಷಿಣ ವಲಯ ವ್ಯಾಪ್ತಿಯ ಪ್ರಮುಖ ರಸ್ತೆಗಳಾದ ಆರ್ಟೀರಿಯಲ್ (ಮುಖ್ಯ ರಸ್ತೆ), ಸಬ್-ಆರ್ಟೀಯಲ್ (ಉಪ ಮುಖ್ಯರಸ್ತೆ) ಹಾಗೂ ವಾರ್ಡ್ ರಸ್ತೆಗಳಲ್ಲಿ ರಸ್ತೆ ಗುಂಡಿಗಳು ಕಂಡುಬಂದಲ್ಲಿ ನೇರವಾಗಿ ದಕ್ಷಿಣ ವಲಯದ ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆ: 26566362/ 22975703 ಗೆ ಸಾರ್ವಜನಿಕರು ಕರೆ ಮಾಡಿ ದೂರು ದಾಖಲಿಸುವಂತೆ ತಿಳಿಸಿದ್ದಾರೆ
BREAKING NEWS : ಡಿಸೆಂಬರ್ ನಲ್ಲಿ ಅದ್ದೂರಿ ‘ಹೊಯ್ಸಳೋತ್ಸವ’ ಆಚರಣೆ : ಸಿಎಂ ಬೊಮ್ಮಾಯಿ ಘೋಷಣೆ