ಬೆಂಗಳೂರು: ನಗರದಲ್ಲಿನ ಪೀಣ್ಯ ಎಲಿವೇಟೆಡ್ ಪ್ಲೈ ಓವರ್ ನ ಮೂಲಕ ಗೋರಗುಂಟೆ ಪಾಳ್ಯಕ್ಕೆ, ಗೋರಗುಂಟೆ ಪಾಳ್ಯದಿಂದ ಪ್ಯಾರ್ಲೇಜಿ ಫ್ಯಾಕ್ಟರಿವರೆಗೆ ಭಾರೀ ವಾಹನಗಳ ಸಂಚಾರವನ್ನು ನಿಷೇಧ ಮಾಡಲಾಗಿತ್ತು. ಇದೀಗ ಜುಲೈ.29ರಿಂದ ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಶನಿವಾರ ಬೆಳಿಗ್ಗೆ 6ರವರೆಗೆ ಒಂದು ದಿನ ಹೊರತುಪಡಿಸಿ, ಇನ್ನುಳಿದ ಎಲ್ಲಾ ದಿನಗಳು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದು, ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ಘಟಕದ ಪೀಣ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಡಾ ಶ್ರೀ ಶಿವಕುಮಾರ ಸ್ವಾಮೀಜಿ ಮೇಲೇತುವೆ( ರಾಷ್ಟ್ರೀಯ ಹೆದ್ದಾರಿ-4 ಪೀಣ್ಯ ಎಲಿವೇಟೆಡ್ ಫೈಓವರ್ ) ಮೇಲೆ ಕೆನ್ಸಮೆಟಲ್ ಮೀಡಿಯಾ ಅಪ್ಪ ರ್ಯಾಂಪ್ ನಿಂದ ಎಸ್.ಆರ್.ಎಸ್. ಡೌನ್ ರ್ಯಾಂಪ್ ವರೆಗೆ ರಸ್ತೆ ಎರಡೂ ಬದಿಗಳಲ್ಲಿ ಭಾರೀ ವಾಹನಗಳನ್ನು ಸಂಚಾರವನ್ನು ನಿಷೇಧಿಸಿ, ದಿನಾಂಕ: 16.02.2022 ರಿಂದ ಮೇಲ್ವೇತುವೆಯ ಎರಡೂ ಕಡೆಗಳಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು, ಇನ್ನುಳಿದ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ರಾತ್ರಿ 12:00 ರಿಂದ ಬೆಳಗ್ಗೆ 05:00 ಗಂಟೆಯವರೆಗೆ ನಿಷೇಧಿಸಿ ಉಲ್ಲೇಖ-1 ರೀತ್ಯಾ ಅಧಿಸೂಚನೆಯನ್ನು ಹೊರಡಿಸಲಾಗಿತ್ತು ಎಂದಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಸಾರ್ವಜನಿಕರಿಂದ ಬಂದಂತಹ ಬೇಡಿಕೆಯನ್ನು ಆಧರಿಸಿ, ಡಾ.ಶ್ರೀ ಶಿವಕುಮಾರಸ್ವಾಮಿಜಿ ಮೇಲೇತುವೆ (ಪೀಣ-ನೆಲಮಂಗಲ ಮೇಲ್ವೇತುವೆ) ನಿರ್ವಹಣಾ ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ದಿನಾಂಕ: 29.07.2024 ರಿಂದ ಪ್ರತಿ ಶುಕ್ರವಾರ ಮಾತ್ರ ಬೆಳಿಗ್ಗೆ 06:00 AM ರಿಂದ ಶನಿವಾರ ಬೆಳಿಗ್ಗೆ 06:00 AM ವರೆಗೆ ಗೌಟಿಂಗ್ ಕಾಮಗಾರಿಯ ಸಲುವಾಗಿ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಿ, ಉಳಿದ ಎಲ್ಲಾ ದಿನಗಳಂದು ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬಹುದೆಂದು ದಿನಾಂಕ: 23.07.2024 ರಂದು ಉಲ್ಲೇಖ-2 ರೀತ್ಯಾ ಮನವೆ ಪತ್ರವನ್ನು ಸಲ್ಲಿಸಿರುತ್ತಾರೆ ಎಂದು ಹೇಳಿದೆ.
ಆದ್ದರಿಂದ ಬೆಂಗಳೂರು ನಗರ ಕಮೀಷನರೇಟ್ ವ್ಯಾಪ್ತಿಯ ಪೀಣ್ಯ ಸಂಚಾರ ಪೊಲೀಸ್ ಠಾಣೆಯ ಮೇಲೇತುವೆಯಲ್ಲಿ ಡಾ.ಶ್ರೀ ಶಿವಕುಮಾರಸ್ವಾಮಿಜಿ ಮೇಲೇತುವೆ (ಪೀಣ-ನೆಲಮರಿಗಲ ಮೇಲೇತುವೆ) ನಿರ್ವಹಣಾ ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ದಿನಾಂಕ: 29.07.2024 ರಿಂದ ಪ್ರತಿ ಶುಕ್ರವಾರ ಮಾತ್ರ ಬೆಳಿಗ್ಗೆ 06:00 AM ರಿಂದ ಶನಿವಾರ ಬೆಳಿಗ್ಗೆ 06:00 AM ವರೆಗೆ ಗೌಟಿಂಗ್ ಕಾಮಗಾರಿಯ ಸಲುವಾಗಿ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಿ, ಉಳಿದ ಎಲ್ಲಾ ದಿನಗಳಂದು ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬಹುದೆಂದು ಅಧಿಸೂಚನೆಯನ್ನು ಹೊರಡಿಸುವುದು ಸೂಕ್ತವೆಂದು ಪರಿಗಣಿಸಲಾಗಿದೆ ಎಂದು ತಿಳಿಸಿದೆ.
ಕಲಂ 115 ಮೋಟಾರು ವಾಹನ ಕಾಯ್ದೆ 1988 ಹಾಗೂ ಕಲಂ 3 ಕರ್ನಾಟಕ ಟ್ರಾಫಿಕ್ ಕಂಟ್ರೋಲ್ ಆಕ್ಟ್ 1960ರ ಪ್ರಕಾರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಬಿ.ದಯಾನಂದ, ಐ.ಪಿ.ಎಸ್ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಆದ ನಾನು, ಮೇಲೆ ಸಕಾರಣಗಳೊಂದಿಗೆ ವಿವರಿಸಿದ ಅಂಶಗಳನ್ನು ಆಧರಿಸಿ, ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ಘಟಕದ ಪೀಣ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯ ಪೀಣ ಮೇಲೇತುವೆ ಮೇಲೆ ಈ ಹಿಂದೆ ಉಲ್ಲೇಖ-1 ರ ಅಧಿಸೂಚನೆ ರೀತ್ಯಾ ನಿರ್ಬಂಧಿಸಲಾಗಿದ್ದ ಭಾರೀ ವಾಹನಗಳ ಸಂಚಾರವನ್ನು ಉಲ್ಲೇಖ-2 ರ ಮನವಿಯನ್ನು ಪರಿಗಣಿಸಿ ಮಾರ್ಪಾಡು ಮಾಡಿ ಈ ಕೆಳಕಂಡಂತೆ ಆದೇಶಿಸಿರುತ್ತೇನೆ ಎಂದಿದ್ದಾರೆ.
ಸಂಚಾರ ಮಾರ್ಪಾಡು :
• ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲೇತುವೆ ರಾಷ್ಟ್ರೀಯ ಹೆದ್ದಾರಿ-4 ಪೀಣ್ಯ ಎಲಿವೇಟೆಡ್ ಫೈಓವರ್ ) ಮೇಲೆ ಕೆನ್ಸಮೆಟಲ್ ಮೀಡಿಯಾ ಅಪ್ಪ ರ್ಯಾಂಪ್ ನಿಂದ ಎಸ್.ಆರ್.ಎಸ್. ಡೌನ್ ರ್ಯಾಂಪ್ ವರೆಗೆ ರಸ್ತೆ ಎರಡೂ ಬದಿಗಳಲ್ಲಿ ಪ್ರತಿ ಗಂಟೆಗೆ 40 ಕಿ.ಮೀ ವೇಗದಲ್ಲಿ ಸಂಚರಿಸುವ ನಿಬಂಧನೆಯೊಂದಿಗೆ ಭಾರೀ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
• ಗೌಟಿಂಗ್ ಕಾಮಗಾರಿಯ ಸಲುವಾಗಿ ದಿನಾಂಕ: 29.07.2024 ರಿಂದ ಮುಂದಿನ ಆದೇಶದವರೆವಿಗೂ ಪ್ರತಿ ಶುಕ್ರವಾರ ಬೆಳಗ್ಗೆ 06:00 ಗಂಟೆಯಿಂದ ಪ್ರತಿ ಶನಿವಾರ ಬೆಳಗ್ಗೆ 06:00 ಗಂಟೆಯವರೆಗೆ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಅಂತೆಯೇ ಕಲಂ 116 ಮೋಟಾರ್ ವಾಹನ ಕಾಯ್ದೆ 1988 ಹಾಗೂ ಕಲಂ 4 ಕರ್ನಾಟಕ ಟ್ರಾಫಿಕ್ ಕಂಟ್ರೋಲ್ ಆಕ್ 1960 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮೇಲಂಡಂತೆ ಸಂಚಾರ ಮಾರ್ಪಾಡುಗಳನ್ನು ಜಾರಿಗೊಳಿಸಲು ಬೇಕಾದ ಅಗತ್ಯ ಸೂಚನಾ ಫಲಕಗಳನ್ನು ಸೂಕ್ತ ಸ್ಥಳಗಳಲ್ಲಿ ಅಳವಡಿಸಲು ಸ್ಥಳೀಯ ಅಧಿಕಾರಿಗಳಿಗೆ ಆದೇಶಿಸಿರುತ್ತೇನೆ.
ಮೇಲ್ಕಂಡ ಸಂಚಾರ ಮಾರ್ಪಾಡುಗಳು ದಿನಾಂಕ: 29.07.2024 ರಿಂದ ಜಾರಿಗೆ ಬರುವಂತೆ ಆದೇಶಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಇನ್ಮುಂದೆ ನಿಮ್ಮ ಭೂಮಿಗೂ ಸಿಗುತ್ತೆ ʻಆಧಾರ್ʼ : ʻಭೂ ಆಧಾರ್ʼ ಕುರಿತು ಇಲ್ಲಿದೆ ಮಾಹಿತಿ | Bhu Aadhar yojana
ಬಿಜೆಪಿ ಪಾದಯಾತ್ರೆ ವಿಚಾರ : ಹಲವರಿಗೆ ಬಿಪಿ-ಶುಗರ್ ಇದೆ, ಪಾದಯಾತ್ರೆ ಆರೋಗ್ಯಕ್ಕೆ ಒಳ್ಳೆಯದು : ಲಕ್ಷ್ಮಣ ಸವದಿ ಲೇವಡಿ