ಬೆಂಗಳೂರು: ರಿಕವರಿ ಮಾಡಿದಂತ ಚಿನ್ನವನ್ನು ವಂಚನೆ ಮತ್ತು ದುರ್ಬಳಕೆ ಆರೋಪದಡಿ ಕಾಟನ್ ಪೇಟೆ ಠಾಣೆಯ ಪಿಎಸ್ಐ ಸಂತೋಷ್ ಅನ್ನು ಅಮಾನುತುಗೊಳಿಸಲಾಗಿದೆ.
ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಕಮೀಷನರ್ ದಯಾನಂದ್ ಅವರು ಆದೇಶಿಸಿದ್ದಾರೆ. 2020ರಲ್ಲಿ ಪಿಎಸ್ಐ ಸಂತೋಷ್ ಅವರು ಹಲಸೂರು ಗೇಟ್ ಠಾಣೆಯ ಪಿಎಸ್ಐ ಆಗಿದ್ದರು. ಈ ವೇಳೆ ಪ್ರಕರಣವೊಂದರ ರಿಕವರಿ ಚಿನ್ನವನ್ನು ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿ ಬಂದಿತ್ತು. ಚಿನ್ನದ ಅಂಗಡಿ ಮಾಲೀಕನ ಬಳಿ ಹೋಗಿ ರಿಕವರಿ ಚಿನ್ನ ತೋರಿಸಬೇಕಿದೆ. ಹೀಗಾಗಿ 950 ಗ್ರಾಂ ಚಿನ್ನದ ಗಟ್ಟಿ ಕೊಡು, ಪೋಟೋ ತೆಗೆಸಿ ವಾಪಾಸ್ ಕೊಡುತ್ತೇನೆ ಎಂಬುದಾಗಿ ಹೇಳಿದ್ದರು.
ಚಿನ್ನದ ಅಂಗಡಿ ಮಾಲೀಕ ಪಿಎಸ್ಐ ಸಂತೋಷ್ ಮಾತು ನಂಬಿ 950 ಗ್ರಾಂ ಚಿನ್ನದ ಗಟ್ಟಿ ನೀಡಿದ್ದರು. ಬಳಿಕ ಚಿನ್ನದ ಅಂಗಡಿ ಮಾಲೀಕ ಚಿನ್ನವನ್ನು ಪಿಎಸ್ಐ ಸಂತೋಷ್ ಕೇಳಿದಾಗ ಹಣ ನೀಡುವುದಾಗಿ ಭದ್ರತೆಗೆ ಸೈಟ್ ಕರಾರು ಮಾಡಿಕೊಟ್ಟಿದ್ದರು. ಆದರೇ ಆ ಸೈಟ್ ಅನ್ನು ಬೇರೆಯವರಿಗೆ ಮಾರಾಟ ಮಾಡಿದ್ದರು. ಮಾಲೀಕ ಮತ್ತೆ ಪ್ರಶ್ನಿಸಿದಾಗ ಖಾಲಿ ಚೆಕ್ ನೀಡಿದ್ದರು. ಅದು ಕೂಡ ಬೌನ್ಸ್ ಆಗಿತ್ತು. ಆದಾದ ಬಳಿಕ ಚಿನ್ನದ ಅಂಗಡಿ ಮಾಲೀಕ ಹಣ, ಚಿನ್ನ ಕೇಳಿದಾಗ ಸಂತೋಷ್ ಬೆದರಿಕೆ ಹಾಕಿದ್ದರು. ಬೇಸತ್ತು ಮಾಲೀಕ ಪಶ್ಚಿಮ ವಿಭಾಗದ ಡಿಸಿಪಿಗೆ ದೂರು ನೀಡಿದ್ದರು.
ಈ ದೂರು ಆಧರಿಸಿ ಎಸಿಪಿ ನೇತೃತ್ವದಲ್ಲಿ ಪ್ರಾಥಮಿಕ ತನಿಖೆ ನಡೆಸಿ ವರದಿ ಸಲ್ಲಿಸಲಾಗಿತ್ತು. ಈ ವರದಿಯನ್ನು ಆಧರಿಸಿ ಪಿಎಸ್ಐ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಪಿಎಸ್ಐ ಸಂತೋಷ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣ ಆಧರಿಸಿ, ಪಿಎಸ್ಐ ಸಂತೋಷ್ ಅವರನ್ನು ಪೊಲೀಸ್ ಕಮೀಷನರ್ ದಯಾನಂದ್ ಅವರು ಅಮಾನತುಗೊಳಿಸಿ ಆದೇಶಿಸಿದ್ದಾರೆ.
120 ಗಂಟೆಗಳಲ್ಲಿ 39,311 ಕೋಟಿ ಗಳಿಸಿದ ‘ಮುಕೇಶ್ ಅಂಬಾನಿ’ | Mukesh Ambani