ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನಲ್ಲಿ ಪುಂಡರ ಹಾವಳಿ ಹೆಚ್ಚುತ್ತಿದ್ದು ಇದೀಗ, ಚಲಿಸುತ್ತಿದ್ದ ಕಾರಿನ ಹಿಂಬದಿ ಇಬ್ಬರು ಯುವಕರು ನೇತಾಡಿ ಹುಚ್ಚುತನ ಮೆರೆದಿರುವ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ.
ಹೌದು ಜಯನಗರದಿಂದ ಬನಶಂಕರಿ ತೆರಳುವ ಮಾರ್ಗದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಟ್ರಾಫಿಕ್ ಪೊಲೀಸರ ಭಯವೇ ಇಲ್ಲದಂತೆ ಯುವಕರ ವರ್ತನೆಯೂ ಇತರೆ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ. ಈ ಘಟನೆಯ ವಿಡಿಯೋ ಸ್ಥಳೀಯರ ಮೊಬೈಲ್ವೊಂದರಲ್ಲಿ ಸೆರೆಯಾಗಿದ್ದು, ಸವಾರರು ಕಿಡಿಕಾರಿದ್ದಾರೆ.
ಇನ್ನು ಬೆಂಗಳೂರಿನ ನೆಲಮಂಗಲದ ಹೆದ್ದಾರಿಯಲ್ಲಿ ಪುಂಡರು ವೀಲಿಂಗ್ ಮಾಡಿದ್ದು, ಹೆದ್ದಾರಿಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ವೀಲಿಂಗ್ ನಡೆಸಿ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿದ್ದಾರೆ. ಪುಂಡರು ವೀಲಿಂಗ್ ಮಾಡುತ್ತಿದ್ದು ವಾಹನದಲ್ಲಿ ಚಲಿಸುತ್ತಿದ್ದ ಇತರೆ ಸವಾರರಿಗೆ ಆತಂಕ ಉಂಟು ಮಾಡಿದ್ದು, ಪೊಲೀಸರು ಯಾವುದೇ ರೀತಿ ಕ್ರಮ ಕೈಗೊಂಡಿಲ್ಲವಾದ್ದರಿಂದ ಈ ರೀತಿ ಪುಂಡರು ಹುಚ್ಚಾಟ ಮೇರೆಯುತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.