ಬೆಂಗಳೂರು : ಪೊಲೀಸರು ಎಷ್ಟೇ ಕಠಿಣವಾದ ಅಂತಹ ಕ್ರಮ ಕೈಗೊಂಡರು ಬೆಂಗಳೂರಿನಲ್ಲಿ ಪುಂಡರ ಅಟಹಾಸ ನಿಲ್ಲುತ್ತಿಲ್ಲ ಇದೀಗ ಯುವಕನೊಬ್ಬ ಕುಡಿದ ಮತ್ತಿನಲ್ಲಿ ಸುಮಾರು ಎಂಟಕ್ಕೂ ಹೆಚ್ಚು ಕಾರುಗಳಿಗೆ ಆನೆ ಮಾಡಿದ್ದು, ಕಲ್ಲು ಎತ್ತಿ ಹಾಕಿ ಗಾಜುಗಳನ್ನು ಪುಡಿಪುಡಿ ಮಾಡಿರುವ ಘಟನೆ ಬೆಂಗಳೂರಿನ ಬ್ಯಾಟರಾಯನಪುರ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಹೌದು ಇಂದು ಬೆಳಗಿನ ಜಾವ 3:00ಗೆ ಮೈಸೂರು ಬೆಂಗಳೂರು ಮುಖ್ಯ ರಸ್ತೆಯ ಬ್ಯಾಟರಾಯನಪುರದಲ್ಲಿ ಕುಡಿದ ಮತ್ತಿನಲ್ಲಿ ಯುವಕನೊಬ್ಬ ಸುಮಾರು 8 ಕಾರುಗಳ ಮೇಲೆ ದಾಳಿ ಮಾಡಿದ್ದು ಕಲ್ಲು ಎತ್ತಿ ಹಾಕಿ ಗಾಜುಗಳು ಸೇರಿದಂತೆ ಕಾರುಗಳ ಇತರೆ ಭಾಗಗಳ ಮೇಲೆ ಕಲ್ಲು ಎತ್ತಿ ಹಾಕಿ ಹಾನಿ ಮಾಡಿದ್ದಾನೆ. ಘಟನೆ ಕುರಿತಂತೆ ಬ್ಯಾಟರಾಯಣಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ