ಬೆಂಗಳೂರು : ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಚಿಕಿತ್ಸೆ ಫಲಿಸಿದೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ 8ನೇ ಮೈಲಿಯ ಪ್ರಕ್ರಿಯ ಆಸ್ಪತ್ರೆಯಲ್ಲಿ ಈ ಒಂದು ಘಟನೆ ನಡೆದಿದೆ. ಆದರೆ ಆಸ್ಪತ್ರೆಯ ವೈದ್ಯರು 2 ಲಕ್ಷ ಹಣ ವಸೂಲಿ ಮಾಡಿದ ಬಳಿಕ ಸಾವನ್ನು ದಡಪಡಿಸಿದ್ದಾರೆ ಎಂದು ಇದೀಗ ಕುಟುಂಬಸ್ಥರು ವೈದ್ಯರ ವಿರುದ್ಧ ಹಾಗೂ ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕಿತ್ಸೆ ಫಲಿಸಿದೆ ಜೆ ಬ್ಯಾಡರಹಳ್ಳಿ ನಿವಾಸಿ ರವಿಕಿರಣ್ (25) ಮೃತಪಟ್ಟ ಯುವಕ ಎಂದು ತಿಳಿದುಬಂದಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಜೆ. ಬ್ಯಾಡರಹಳ್ಳಿ ನಿವಾಸಿ ರವಿಕಿರಣ್ ಮನೆಯವರು ನಿಂದಿಸಿದ್ದಾರೆ ಎಂದು ನಿನ್ನೆ ಮನೆಯಲ್ಲಿ ವಿಷ ಸೇವಿಸಿದ್ದ. ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯ ಬಳಿಕ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿತ್ತು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸಲಹೆ ನೀಡಿದರು.
ಆದರೆ ಆಂಬುಲೆನ್ಸ್ ವಾಹನದ ಚಾಲಕ ಪ್ರಕ್ರಿಯೆ ಆಸ್ಪತ್ರೆಗೆ ದಾಖಲಿಸಿದ್ದ ರಾತ್ರಿ 9:00 ಸುಮಾರಿಗೆ ಚಿಕಿತ್ಸೆ ಫಲಿಸಿದೆ ರವಿಕಿರಣ್ ಸಾವನ್ನಪ್ಪಿದ್ದಾನೆ. ಎರಡು ಲಕ್ಷ ರೂಪಾಯಿ ಮಾಡಿದ ಆರೋಪ ಇದೀಗ ಕೇಳಿ ಬರುತ್ತಿದೆ ಪ್ರಕ್ರಿಯ ಆಸ್ಪತ್ರೆ ವೈದ್ಯರ ವಿರುದ್ಧ ರವಿಕಿರಣ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಐಸಿಯುನಲ್ಲಿ ಮೃತದೇಹ ಇರಿಸಿಕೊಂಡು ಬಿಲ್ ವಸೂಲಿ ಮಾಡಿದ ಆರೋಪ ಕೇಳಿ ಬಂದಿದ್ದು ಪ್ರಕ್ರಿಯೆ ಆಸ್ಪತ್ರೆ ಮುಂದೆ ಕುಟುಂಬಸ್ಥರು ಇದೀಗ ಪ್ರತಿಭಟನೆ ಮಾಡುತ್ತಿದ್ದಾರೆ.
ಅಹಿತಕರ ಘಟನ್ರ ನಡೆದಂತೆ ಸ್ಥಳದಲ್ಲಿ ಬಾಗಲಕುಂಟೆ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಮಾತ್ರೆ ಸೇವಿಸಿದ್ದ ಕಿರಣ್ ಬದುಕಿಸಲು ಸಾಕಷ್ಟು ಪ್ರಯತ್ನ ಮಾಡಿದ್ದೆವು. ಆದರೆ ಚಿಕಿತ್ಸೆ ಬೆಳೆ ಹೃದಯಾಘಾತವಾಗಿ ರವಿ ಕಿರಣ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯ ಡಾ.ಶಯನ್ ಹೇಳಿಕೆ ನೀಡಿದ್ದಾರೆ. ವಿಕ್ಟವಿಕ್ಟೊರಿಯ ಆಸ್ಪತ್ರೆಯಲ್ಲಿ ರವಿಕಿರಣ ಮರಣೋತ್ತರ ಪರೀಕ್ಷೆ ನಡೆಯಲಿದೆ. ಬಳಿಕ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಾಗುತ್ತದೆ.ಪ್ರಕರಣ ಸಂಬಂಧ ಹೆಚ್ಚಿನ ಬಾಗಲಕುಂಟೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.