ಬೆಂಗಳೂರು: ಮಿಸ್ಡ್ ಕಾಲ್ ಕೊಟ್ಟು ಯುವಕರನ್ನು ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ಮೂವರ ಗುಂಪೊಂದನ್ನು ಸಂಪಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನಜ್ಮಾ ಕೌಸರ್, ಮೊಹಮ್ಮದ್ ಅತೀಕ್ ಹಾಗೂ ಕರೀಂ ಉಲ್ಲಾ ಬಂಧಿತರು.
ಹೌದು ಕೇವಲ ಯುವಕರನ್ನೇ ಬಂಧಿತರು ಟಾರ್ಗೆಟ್ ಮಾಡುತ್ತಿದ್ದರು. ಬಂಧಿತರಲ್ಲಿ ನಜ್ಮಾ ಎಂಬಾಕೆ ಬೆಂಗಳೂರಿನ ಯುವಕರನ್ನೇ ಗುರಿಯಾಗಿಸಿಕೊಂಡು,ಅವರೊಂದಿಗೆ ಕಷ್ಟ ಸುಖ ಮಾತನಾಡಿಕೊಂಡು ಆತ್ಮೀಯತೆ ಬೆಳೆಸಿಕೊಳ್ಳುತ್ತಿದ್ದಳು. ಅವರಿಂದ ಸಣ್ಣ ಮೊತ್ತದ ಹಣ ಪಡೆದು ಹಿಂತಿರುಗಿಸುವ ಮೂಲಕ ವಿಶ್ವಾಸ ಗಳಿಸುತ್ತಿದ್ದಳು. ಹಾಗೆಯೇ ಮುಂದುವರೆದು ದಿಢೀರನೆ ಒಮ್ಮೆ ಆ ಯುವಕರನ್ನು ಮನೆಯಲ್ಲಿ ಯಾರೂ ಇಲ್ಲ ಬಾ ಎಂದು ಕರೆಯುತ್ತಿದ್ದಳು.
ಮನೆಗೆ ಹೋದವರನ್ನು ಲೈಂಗಿಕವಾಗಿ ಪ್ರಚೋದಿಸಿ ಬೆಡ್ ರೂಂಗೆ ಕರೆದೊಯ್ಯುತ್ತಿದ್ದಳು. ಬೆಡ್ರೂಂಗೆ ಹೋಗುತ್ತಿದ್ದಂತೆಯೇ ಎಂಟ್ರಿಯಾಗುತ್ತಿದ್ದ ಉಳಿದ ಆರೋಪಿಗಳು ಬೆದರಿಸಿ, ಅತ್ಯಾಚಾರದ ಆರೋಪ ಹೊರಿಸಿ ಕೇಳಿದಷ್ಟು ಹಣ ಕೊಡುವಂತೆ ಪೀಡಿಸುತ್ತಿದ್ದರು. ಹಣ ಕೊಡದಿದ್ದರೆ ಕೇಸ್ ಹಾಕಿಸುತ್ತೇವೆಂದು ಬೆದರಿಸಿ ಸುಲಿಗೆ ಮಾಡುತ್ತಿದ್ದರು.
ಇವರ ಒಂದು ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ ಎಂದರೆ ಕಳೆದ ವಾರ ಕೊರಿಯರ್ ಬಾಯ್ ಒಬ್ಬನನ್ನು ಹನಿಟ್ರ್ಯಾಪ್ ಮಾಡಿ ಮನೆಗೆ ಕರೆಸಿಕೊಂಡಿದ್ದರು. ಸಂತ್ರಸ್ತ ಯುವಕ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಈ ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.