ಬೆಂಗಳೂರು : ಇತ್ತೀಚಿಗೆ ಆನ್ಲೈನ್ ನಲ್ಲಿ ಹಣ ಕಳೆದು ಕೊಳ್ಳುತ್ತಿರುವವರ ಸಂಖ್ಯೆ ಜಾಸ್ತಿ ಆಗುತ್ತಿದೆ. ಅದರಲ್ಲೂ, ಬುದ್ಧ ಜನರನ್ನೇ ಸೈಬರ್ ಕಳ್ಳರು ಟಾರ್ಗೆಟ್ ಮಾಡುತ್ತಿದ್ದಾರೆ.ವರ್ಕ್ ಫ್ರಂ ಹೋಮ್ ಕೆಲಸದ ಆಮಿಷವೊಡ್ಡಿ ಸೈಬರ್ ವಂಚಕರು ಮಹಿಳಾ ಇಂಜಿನೀಯರ್ಗೆ ಲಕ್ಷ ಲಕ್ಷ ವಂಚನೆ ಮಾಡಿರುವ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಿಶಾ ಯಾದವ್(36) ವಂಚನೆಗೊಳಗಾದ ಮಹಿಳೆ. ಎಚ್ಎಎಲ್ ನಿವಾಸಿಯಾಗಿರುವ ಮಹಿಳೆ. ವಂಚಕರ ಮಾತುಗಳನ್ನು ನಂಬಿ 18 ಲಕ್ಷ ರೂ.ಕಳೆದುಕೊಂಡಿದ್ದಾರೆ.ಸೈಬರ್ ಕಳ್ಳರು ಲಕ್ಷಾಂತರ ರೂಪಾಯಿ ಲಪಟಾಯಿಸಿರುವ ಬಗ್ಗೆ ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ.
ಮಹಿಳೆ ಮೊಬೈಲ್ ನಂಬರ್ ಕಲೆಕ್ಟ್ ಮಾಡಿಕೊಂಡಿರುವ ಖದೀಮರು. ಮೊದಲಿಗೆ ವರ್ಕ್ ಫ್ರಂ ಹೋಮ್ ಕೆಲಸ ಇದೆ ಎಂದು ಸಂದೇಶ ಕಳಿಸಿದ್ದಾರೆ. ಬಳಿಕ ಟೆಲಿಗ್ರಾಾಂ ಲಿಂಕ್ ಕಳಿಸಿ ಇದರಲ್ಲಿ ಜಾಯಿನ್ ಆಗುವಂತೆ ಮಹಿಳೆಗೆ ತಿಳಿಸಿದ್ದಾರೆ. ವಂಚಕರ ತಿಳಿಸಿದಂತೆ ಜಾಯಿನ್ ಆಗಿದ್ದಾರೆ. ನಂತರ ಅಶ್ವಿನಿ ಎಂಬ ಹೆಸರಿನಲ್ಲಿ ನಿಶಾಗೆ ಒಂದು ಸಂದೇಶ ಬಂದಿದೆ.
17 ಉಚಿತ ಟಾಸ್ಕ್ ಹಾಗೂ 5 ಶುಲ್ಕ ಪಾವತಿಸುವ ಟಾಸ್ಕ್ ಇರುತ್ತದೆ. ಪ್ರತಿ ಟಾಸ್ಕ್ ಗೆ 50 ರೂ.ಶುಲ್ಕ ಇದೆ. ನೀವು ಟಾಸ್ಕ್ ಕಂಫ್ಲೀಟ್ ಮಾಡಲು ಹಣ ಕಳುಹಿಸಬೇಕಾಗುತ್ತದೆ ಎಂದು ನಂಬಿಸಿದ್ದಾರೆ. ಮಹಿಳೆ ವಂಚಕರ ಮಾತು ನಂಬಿ ಅದರಂತೆ ಮೊದಲಿಗೆ 7.82 ಲಕ್ಷ ರೂ. ಕಳಿಸಿರುವ ನಿಶಾ ಬಳಿಕ ಹಂತಹಂತವಾಗಿ 18 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ.
ಕೆಲವು ದಿನಗಳ ನಂತರ ಹಣ ಪಡೆದ ಬಳಿಕ ಯಾವುದೇ ಕೆಲಸ ನೀಡಿಲ್ಲ ಇತ್ತ ಹಣವೂ ವಾಪಸ್ ಬಂದಿಲ್ಲ. ಈ ವೇಳೆ ತಾವು ಸೈಬರ್ ವಂಚಕರಿಂದ ಮೋಸಹೋಗಿದ್ದೇನೆ ಎಂದು ಮಹಿಳೆಗೆ ತಿಳಿಯುತ್ತಿದ್ದಂತೆ ಶಾಕ್ ಆಗಿರುವ ಮಹಿಳೆ. ಸದ್ಯ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.