ಬೆಂಗಳೂರು : ಇಂದು ಬೆಂಗಳೂರಲ್ಲಿ ಬಿಎಂಟಿಸಿ ಬಸ್ ನಲ್ಲಿ ಸಂಚರಿಸುವಾಗ ಮಹಿಳೆಯೊಬ್ಬರ ಚಿನ್ನದ ಸರ ಕಳ್ಳತನವಾಗಿದೆ. ಬೆಂಗಳೂರಿನ ಹೇಸರಘಟ್ಟ ರಸ್ತೆಯ ಬೋನ್ ಮಿಲ್ ಬಳಿ ಈ ಒಂದು ಘಟನೆ ನಡೆದಿದೆ.
ಬಸ್ ನಲ್ಲಿ ಸುಮಾರು 2, ಮೌಲ್ಯದ 25 ಗ್ರಾಂ ಚಿನ್ನವನ್ನು ಪ್ರೇಮಮ್ಮ ಎನ್ನುವವರು ಕಳೆದುಕೊಂಡಿದ್ದಾರೆ. ಕೆ ಎ 57 ಎಫ್ 4760 ಸಂಖ್ಯೆಯ ಬಿಎಂಟಿಸಿ ಬಸ್ ನಲ್ಲಿ ಈ ಒಂದು ಘಟನೆ ನಡೆದಿದೆ.ಸಂಬಂಧಿ ನಿಖಿಲ್ ಮನೆಗೆ ಬಸ್ ನಲ್ಲಿ ಬರುತ್ತಿದ್ದಾಗ ಈ ಒಂದು ಕೃತ್ಯ ನಡೆದಿದೆ. ಬಾಗಲಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.