ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಾಮಳೆಗೆ ಯುವತಿ ಬಲಿಯಾಗಿರುವ ಘಟನೆ ನಡೆದಿದೆ. ಅಖಿಲಾ (23) ಮೃತ ಯುವತಿಯಾಗಿದ್ದು, ಸೋಮವಾರ ರಾತ್ರಿ 8 ಗಂಟೆಗೆ ಕೆಲಸ ಮುಗಿಸಿಕೊಂಡು ಹೊರಟ್ಟಿದ್ದ ವೇಳೇಯಲ್ಲಿ, ಸಿದ್ದಾಪುರ ಬಳಿ ಇರುವ ಮಯೂರ ಬೇಕರಿ ಸಮೀಪ ನಿಂತಿದ ನೀರಿನ ನಡುವೆ ವಾಹವನ್ನು ಚಲಾಯಿಸುವಲು ಮುಂದಾಗಿದ್ದಾರೆ, ಆದರೆ ನೀರಿನ ಮಟ್ಟ ಇದ್ದಕ್ಕಿದ್ದ ಹಾಗೇ ಹೆಚ್ಛಳವಾಗಿದೆ. ಕೂಡಲೇ ಎಂಜಿನ್ ಆಫ್ ಆಗಿದೆ ಈ ವೇಳೆಯಲ್ಲಿ ಗಾಡಿ ನೂಕಿದ ಹಾಗೇ ಆಗಿದೆ, ಈ ವೇಳೆ ಕೆಳಗೆ ಬೀಳುತ್ತಿದ್ದ ಅಖಿಲಾ ಸಹಾಯಕ್ಕೆ ಬಲ ಭಾಗದಲ್ಲಿಯೇ ಇದ್ದ ಎಲೆಕ್ಟ್ರಿಕಲ್ ಪೋಲ್ ಮುಟ್ಟಿದ ಪರಿಣಾಮ ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಈ ನಡುವೆ , ಬೆಸ್ಕಾಂ ವಿದ್ಯುತ್ ಕಂಬಗಳ ಸರಿಯಾದ ನಿರ್ವಹಣೆ ಮಾಡದೇ ಇರುವುದೇ ಅಖಿಲಾ ಸಾವಿಗೆ ಕಾರಣ ಎಂದು ಬಿಬಿಎಂಪಿ, ಬೆಸ್ಕಾಂ ಅಧಿಕಾರಿಗಳ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.