ಬೆಂಗಳೂರು : ದೇವಸ್ಥಾನಕ್ಕೆ ಪೂಜೆಗೆ ಹೋಗಿದ್ದಾಗ ಕುಟುಂಬದ ಮೇಲೆ ಅಟ್ಯಾಕ್ ಮಾಡಲಾಗಿದೆ. ಕುಟುಂಬ ಸಮೇತ ಪೂಜೆ ಮುಗಿಸಿ ಬರುವಾಗ ದಾಳಿ ನಡೆಸಲಾಗಿದೆ. ಕೆಆರ್ ಪುರಂ ನ ಬೆಂಡಿಗಾನಹಳ್ಳಿ ಈ ಒಂದು ಘಟನೆ ನಡೆದಿದ್ದು, ಸಿನಿಮಾ ಸ್ಟೈಲ್ ನಲ್ಲಿ ದೊಣ್ಣೆ ಮತ್ತು ಮಾರಕಾಸ್ತ್ರಗಳಿಂದ ಒಂದು ಕುಟುಂಬದ ಮೇಲೆ ಮತ್ತೊಂದು ಕುಟುಂಬದಿಂದ ಹಲ್ಲೆ ನಡೆದಿದೆ.
ಕಾಟೇರಮ್ಮ ದೇವಾಲಯದ ಬಳಿ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ನಾರಾಯಣಸ್ವಾಮಿ ಕಿರಣ್, ಚಂದ್ರು ಹಾಗು ಹತ್ತು ಜನರಿಂದ ಶ್ರೀನಿವಾಸ್ ಕುಟುಂಬದ ಮೇಲೆ ಹಲ್ಲೆ ನಡೆಸಲಾಗಿದ್ದು, ಘಟನೆಯಲ್ಲಿ ಶ್ರೀನಿವಾಸ್, ಮಂಜುಳಾ, ಗಗನ್ ಮತ್ತು ಗಾನವಿಗೆ ಹಲ್ಲೆಯಿಂದ ಗಾಯಗೊಂಡಿದ್ದಾರೆ. ಸಾರ್ವಜನಿಕರ ಎದುರು ದೊಣ್ಣೆ ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ.
ಶ್ರೀನಿವಾಸ್ ಮತ್ತು ಚಂದ್ರು ಕುಟುಂಬದ ನಡುವೆ ಜಮೀನು ವಿವಾದ ಸಂಬಂಧ ಈ ಒಂದು ಘಟನೆ ನಡೆದಿದೆ. ಜಮೀನು ವಿಚಾರವಾಗಿ ಪ್ರಕರಣ ಕೋರ್ಟ್ ನಲ್ಲಿ ಇತ್ತು. ಚಂದ್ರು ಮತ್ತು ಶ್ರೀನಿವಾಸ್ ಮನೆ ಕಾಂಪೌಂಡ್ ವಿಚಾರಕ್ಕೆ ಪ್ರಕರಣ ದಾಖಲಾಗಿತ್ತು. ಈ ಹಿಂದೆಯೂ ಗಲಾಟೆಯಾಗಿ ಕೌಂಟರ್ ಕೇಸ್ ಆಗಿತ್ತು . 3-4 ವರ್ಷಗಳ ಹಿಂದೆ ಗಲಾಟೆ ಆಗಿ ದೂರು ನೀಡಿದ್ದರು. ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.