ಬೆಂಗಳೂರು: ಬೇಸಿಗೆಯ ಹೊತ್ತಿನಲ್ಲೇ ನೀರಿನ ಅಭಾವವನ್ನೇ ಬಂಡವಾಳ ಮಾಡಿಕೊಂಡು ಬೆಂಗಳೂರಲ್ಲಿ ಟ್ಯಾಂಕರ್ ನೀರಿನ ದರ ಹೆಚ್ಚಳ ಸೇರಿದಂತೆ ಜನರಿಗೆ ಬರೆಯನ್ನು ಎಳೆಯಲಾಗಿತ್ತು. ಈಗ ಬೆಂಗಳೂರಲ್ಲಿ ವಾಟರ್ ಟ್ಯಾಂಕರ್ ಮಾಫಿಯಾಗೆ ಬಿಬಿಎಂಪಿ ಕಡಿವಾಣ ಹಾಕುವಂತ ನಿರ್ಧಾರ ಕೈಗೊಂಡಿದೆ. ಅಲ್ಲದೇ ಮಾರ್ಚ್.7ರೊಳಗೆ ವಾಟರ್ ಟ್ಯಾಂಕರ್ ನೋಂದಣಿ ಮಾಡಿಸಿಕೊಳ್ಳುವಂತೆ ಖಡಕ್ ಸೂಚನೆ ನೀಡಿದೆ.
ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಅವರು, ವಾಟರ್ ಟ್ಯಾಂಕ್ ಮಾಲೀಕರು ಮಾರ್ಚ್.7ರ ಒಳಗಾಗಿ ನೀರು ಸರಬರಾಜು ಮಾಡುವುದಕ್ಕೆ ನೋಂದಣಿ ಮಾಡಿಕೊಳ್ಳಬೇಕು. ಒಂದು ವೇಳೆ ನೋಂದಣಿ ಮಾಡಿಕೊಳ್ಳದೇ ಇದ್ದರೇ ಅಂತಹ ವಾಟರ್ ಟ್ಯಾಂಕರ್ ಗಳನ್ನು ವಶಕ್ಕೆ ಪಡೆಯೋದಾಗಿ ಎಚ್ಚರಿಕೆ ನೀಡಿದರು.
ವಾಟರ್ ಟ್ಯಾಂಕರ್ ಗಳು ಟ್ರೇಡ್ ಲೈಸೆನ್ಸ್ ಪಡೆಯಬೇಕು. ಸಾರಿಗೆ ಇಲಾಖೆ ಪ್ರಕಾರ 3,500 ವಾಟರ್ ಟ್ಯಾಂಕರ್ ಗಳು ಇದ್ದಾವೆ. ಇವುಗಳೆಲ್ಲ ಮಾರ್ಚ್.1ರಿಂದ ಮಾರ್ಚ್.7ರೊಳಗಾಗಿ ನೋಂದಣಿ ಮಾಡಿಕೊಳ್ಳಬೇಕು. ಟ್ರೇಡ್ ಲೈಸೆನ್ಸ್ ಪಡೆಯದೇ ನೀರು ಸರಬರಾಜು ಮಾಡುವಂತಿಲ್ಲ. ನೋಂದಣಿ ಮಾಡಿಕೊಳ್ಳದಂತ ಟ್ಯಾಂಕರ್ ಗಳನ್ನು ವಶಕ್ಕೆ ಪಡೆಯೋದಾಗಿ ತಿಳಿಸಿದರು.
ಗ್ರಾಹಕರಿಗೆ ‘ಮ್ಯಾನೇಜರ್’ ವಂಚನೆ ಆರೋಪ: ಈ ಸ್ಪಷ್ಟನೆ ಕೊಟ್ಟ ‘ICICI ಬ್ಯಾಂಕ್’
ಭಾರತೀಯ ರಾಕೆಟ್ ಜಾಹೀರಾತಿನಲ್ಲಿ ಚೀನಾದ ಧ್ವಜ : ‘DMK ಸರ್ಕಾರ’ದ ವಿರುದ್ಧ ‘ಪ್ರಧಾನಿ ಮೋದಿ’ ವಾಗ್ದಾಳಿ