ಬೆಂಗಳೂರು : ಮನೆಯ ಶೌಚ ಗುಂಡಿ ಸ್ವಚ್ಛಗೊಳಿಸಲು ಪೌರಕಾರ್ಮಿಕರನ್ನು ಬಳಕೆ ಮಾಡಿದ್ದಾರೆ ಈ ಹಿನ್ನೆಲೆಯಲ್ಲಿ ಮನೆಯ ಮಾಲೀಕ ಶ್ರೀನಿವಾಸ ಸೇರಿ ಐವರ ವಿರುದ್ಧ ಇದೀಗ FIR ದಾಖಲು ಮಾಡಲಾಗಿದೆ. ಮಾಗಡಿ ತಾಲೂಕಿನ ಬೀಚನಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಬಿಜಿನ ಹಳ್ಳಿಯಲ್ಲಿ ಪೌರಕಾರ್ಮಿಕರನ್ನು ಮನೆಯ ಶೌಚ ಗುಂಡಿ ಸ್ವಚ್ಛಗೊಳಿಸಲು ಪೌರ ಕಾರ್ಮಿಕರನ್ನು ಬಳಸಿಕೊಂಡಿದ್ದಾರೆ. ಕುದೂರು ಠಾಣೆಯಲ್ಲಿ ಮನೆಯ ಮಾಲೀಕ ಶ್ರೀನಿವಾಸ್, ಪತ್ನಿ ವಿಜಯಲಕ್ಷ್ಮಿ, ಪುತ್ರರಾದ ಪ್ರದೀಪ್, ಕೃಷ್ಣಮೂರ್ತಿ, ಹಾಗೂ ವಿಜಯ್ ಕುಮಾರ್ ವಿರುದ್ಧ ಕೇಸ್ ದಾಖಲಾಗಿದೆ.
ಯಂತ್ರದ ಬದಲು ಪೌರಕಾರ್ಮಿಕರಿಂದ ಶೌಚ ಗೊಂಡಿ ಸ್ವಚ್ಛಗೊಳಿಸಿದ್ದಾರೆ ಯೋಗೇಶ್ ಪ್ರವೀಣ್ ಮತ್ತು ನರಸಿಂಹಮೂರ್ತಿ ಎಂಬ ಪೌರಕಾರ್ಮಿಕರ ರನ್ನು ಬಳಕೆ ಮಾಡಿದ್ದಾರೆ ಹಾಗಾಗಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ದೂರು ಆಧರಿಸಿ FIR ದಾಖಲಿಸಲಾಗಿದೆ.