ಬೆಂಗಳೂರು : ಬೆಂಗಳೂರಿನಲ್ಲಿ ಘೋರವಾದಂತಹ ದುರಂತ ಸಂಭವಿಸಿದ್ದು, ಬನ್ನೇರುಘಟ್ಟ ಸಮೀಪದ ಸುವರ್ಣಮುಖಿ ಕಲ್ಯಾಣಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮುಳುಗಿ ಸಾವನಪ್ಪಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಸುವರ್ಣಮುಖಿ ಕಲ್ಯಾಣಿಯಲ್ಲಿ ಈ ಒಂದು ಘೋರವಾದ ದುರಂತ ಸಂಭವಿಸಿದೆ.
ಮೃತ ವಿದ್ಯಾರ್ಥಿಗಳನ್ನ ಬೊಮ್ಮನಹಳ್ಳಿಯ ದೀಪು (20) ಹಾಗೂ ಯೋಗೀಶ್ವರನ್ (20) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ಹೆಬ್ಬಗೋಡಿ ಬಳಿಯ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಓದುತ್ತಿದ್ದರು. ಸ್ನೇಹಿತರ ಜೊತೆ ಬನ್ನೇರುಘಟ್ಟಕ್ಕೆ ದೀಪು ಮತ್ತು ಯೋಗೇಶ್ವರನ್ ತೆರಳಿದ್ದರು.
ಮೊದಲು ಸುವರ್ಣಮುಖಿ ಕಲ್ಯಾಣಿಗೆ ಯೋಗೀಶ್ವರನ್ ಇಳಿದಿದ್ದಾನೆ ನೀರಿನಲ್ಲಿ ಮುಳುಗುತ್ತಿದ್ದ ಯೋಗೀಶ್ವರನ್ ನೆರವಿಗೆ ಆತನ ಸ್ನೇಹಿತ ದೀಪು ಕಲ್ಯಾಣಿಯಲ್ಲಿ ಮುಳುಗಿ ಇಬ್ಬರು ಸ್ನೇಹಿತರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ದೀಪು ಮತ್ತು ಯೋಗೀಶ್ವರನ್ ಶವಗಳನ್ನು ಹೊರ ತೆಗೆದಿದ್ದಾರೆ. ಘಟನೆ ಕುರಿತಂತೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.