ಬೆಂಗಳೂರು : ಸುಮಾರು 46 ಪ್ರಕರಣಗಳ ಭಾಗಿಯಾಗಿದ್ದ, ಹಾಗೂ 25 ವರ್ಷಗಳ ಹಿಂದಿನ ಕಳ್ಳತನ ಪ್ರಕರಣಗಳ ಆರೋಪಿಗಳನ್ನು ಇದೀಗ ಅರೆಸ್ಟ್ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ತಿರುಮಲ ಶೆಟ್ಟಿ ಹಳ್ಳಿಯ ಠಾಣೆಯ ಪೊಲೀಸರು ಇದೀಗ ಇಬ್ಬರನ್ನು ಬಂಧಿಸಿದ್ದಾರೆ.
ಹೌದು ಕಳೆದ 25 ವರ್ಷಗಳ ಬಳಿಕ ಸರದಾರ (50) ಸುಹೇಲ್ (51) ಎನ್ನುವವರ ಬಂಧನವಾಗಿದೆ. ಬಂಧಿತರು, ಬೆಂಗಳೂರಿನ ದೇವರಜೀವನಹಳ್ಳಿ ಮತ್ತು ಬನಶಂಕರಿ ನಿವಾಸಿಗಳು ಎಂದು ತಿಳಿದು ಬಂದಿದೆ. ಕಳೆದ 25 ವರ್ಷಗಳಿಂದ ಇವರಿಬ್ಬರು ತಲೆ ಮರೆಸಿಕೊಂಡಿದ್ದರು. 46 ಪ್ರಕರಣಗಳಲ್ಲಿ ಬೇಕಾಗಿದ್ದ ಇಬ್ಬರನ್ನು ಇದೀಗ ಅರೆಸ್ಟ್ ಮಾಡಲಾಗಿದೆ.
ತಿರುಮಲ ಶೆಟ್ಟಿ ಹಳ್ಳಿ ಠಾಣೆಯಲ್ಲಿ 5 ಕೇಸ್, ಹೊಸಕೋಟೆಯಲ್ಲಿ 5, ಅನುಬಂಧನ ಹಳ್ಳಿಯಲ್ಲಿ 5, ನಂದಗುಡಿ ಠಾಣೆಯಲ್ಲಿ 7, ಕೆಂಗೇರಿ ಠಾಣೆಯಲ್ಲಿ 1, ಸರ್ಜಾಪುರದಲ್ಲಿ 1, ವರ್ತುರ್ ಠಾಣೆಯಲ್ಲಿ 1, ಜ್ಞಾನಭಾರತಿ ಠಾಣೆಯಲ್ಲಿ 1, ಕೋಲಾರ ಜಿಲ್ಲೆಯ ಮಾಲೂರು ಠಾಣೆಯಲ್ಲಿ 20 ಪ್ರಕರಣಗಳು ದಾಖಲಾಗಿದ್ದವು. ಮನೆಗಳ್ಳತನ ಮತ್ತು ದರೋಡೆ ಪ್ರಕರಣಗಳಲ್ಲಿ ಇಬ್ಬರು ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.