ಬೆಂಗಳೂರು : ಇಂದು ಬೆಂಗಳೂರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ 16 ಚಕ್ರದ ಲಾರಿಯೊಂದು ಮೆಟ್ರೋ ತಡೆಗೋಡೆಗೆ ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರಿನ ಔಟರ್ ರಿಂಗ್ ರೋಡ್ ನಲ್ಲಿ ಸಂಭವಿಸಿದೆ.
16 ಚಕ್ರದ ಲಾರಿಯ ಅಪಘಾತವಾಗಿದೆ.ನಿಯಂತ್ರಣ ತಪ್ಪಿ ಮೆಟ್ರೋ ತಡೆಗೋಡೆಗೆ ಲಾರಿ ಡಿಕ್ಕಿ ಹೊಡೆದಿದೆ. ನಾಗವಾರ ಹೆಬ್ಬಾಳ ಮಾರ್ಗದ ಕೆಂಪಾಪುರದ ಬಳಿ ಈ ಒಂದು ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಸದ್ಯ ಜೆಸಿಬಿ ಮೂಲಕ ಪೊಲೀಸರು ಲಾರಿ ಅನ್ನು ತೆರವು ಮಾಡಿಸಿದ್ದಾರೆ. ನಾಗವರ ಹೆಬ್ಬಾಳ ಮಾರ್ಗದ ಕೆಲವು ಕಾಲ ಕಿಲೋಮಿಟರ್ ವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು.