ಬೆಂಗಳೂರು : ತಾನು ಪೊಲೀಸ್ ಎಂದು ಹೇಳಿ ನಾನು ಬಂದಾಗ ಎಲ್ಲರೂ ಮಾಮೂಲಿ ಕೊಡಬೇಕು ಎಂದು ಹೆದರಿಸಿ ಮಂಗಳಮುಖಿಯರಿಗೆ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಮಾದನಾಯಕನ ಹಳ್ಳಿಯಲ್ಲಿ ನಡೆದಿದೆ.
ಪೊಲೀಸ್ ಎಂದು ಹೇಳಿ ಮಂಗಳಮುಖಿಯರಿಗೆ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ನಡೆದಿದೆ. ಫೇಕ್ ಪೊಲೀಸ್ ಹೆಸರಲ್ಲಿ ರಾಮಾಂಜಿನೇಯ ಎಂಬುವವನಿಂದ ಮಂಗಳಮುಖಿಯರಿಗೆ ಕಿರುಕುಳ ನೀಡಲಾಗಿದೆ ಎಂದು ಆರೋಪ ಕೇಳಿ ಬಂದಿದೆ.
ನಾನು ಬಂದಾಗ ಮಾಮೂಲಿ ಕೊಡಬೇಕು ಎಂದು ಮಂಗಳಮುಖಿಯರಿಗೆ ಫೇಕ್ ಪೊಲೀಸ್ ಬೆದರಿಕೆ ಹಾಕಿದ್ದಾನೆ. ಮಾಮೂಲಿ ಕೊಡದಿದ್ದರೆ ತೊಂದರೆ ಕೊಡುತ್ತೇನೆ ಎಂದು ಅವರಿಗೆ ಬೆದರಿಕೆ ಹಾಕಿದ್ದಾನೆ.ರಕ್ಷಣೆ ಕೋರಿ ಮಾದನಾಯಕನಹಳ್ಳಿ ಪೊಲೀಸ್ ರಿಗೆ ಮಂಗಳಮುಖಿಯರು ಮನವಿ ಮಾಡಿದ್ದಾರೆ. ನಮಗೆ ರಕ್ಷಣೆ ನೀಡುವಂತೆ ಈಗ ಪೊಲೀಸ್ರ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.