ಬೆಂಗಳೂರು : ವಿದೇಶದಿಂದ ಡ್ರಗ್ಸ್ ತಂದು ಬೆಂಗಳೂರಿನಲ್ಲಿ ವಾಟ್ಸಪ್ ಮೂಲಕ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಿದ ಬೆಂಗಳೂರು ಪೊಲೀಸರು, ಇದೀಗ ಇಬ್ಬರು ವಿದೇಶಿ ಡ್ರಗ್ ಪೆಡ್ಲರ್ ಗಳು ಸೇರಿದಂತೆ ಒಟ್ಟು ಮೂವರನ್ನು ಬೆಂಗಳೂರಿನ ಆಡುಗೋಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೌದು ಇಬ್ಬರು ವಿದೇಶಿಗರು ಸೇರಿ ಮೂರು ಡ್ರಗ್ ಪೆಡ್ಲರ್ಗಳ ಬಂಧನವಾಗಿದ್ದು, ಬೆಂಗಳೂರಿನ ಆಡುಗೋಡಿ ಠಾಣೆ ಪೋಲಿಸರಿಂದ ಈ ಒಂದು ಕಾರ್ಯಚರಣೆ ನಡೆದದೆ. ಡ್ರಗ್ ಪೆಡ್ಲರ್ ಅಮಿತ್ ನೈಜೀರಿಯಾ ಮೂಲದ ಸ್ಯಾಮ್ಸನ್ ಘಾನಾ ಮೂಲದ ಐಶಾಕ್ ಜಾಯ್ ಎಂಬ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತರಿಂದ 77 ಲಕ್ಷ ಮೌಲ್ಯದ 743 ಗ್ರಾಂ MDMA ಹಾಗೂ 1.25 ಕೆಜಿ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿದೇಶದಿಂದ MDMA ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು. ವಾಟ್ಸಪ್ ಮೂಲಕ ಬೆಂಗಳೂರಿನಲ್ಲಿ ಈ ಆರೋಪಿಗಳು ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.