ಬೆಂಗಳೂರು : ಬೆಂಗಳೂರಿನಲ್ಲಿ ಪಶ್ಚಿಮ ಬಂಗಾಳ ಮೂಲದ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ, ರಾತ್ರೋರಾತ್ರಿ ಮಹಿಳೆ ಮನೆಗೆ ನುಗ್ಗಿ ಐವರು ಆರೋಪಿಗಳು ದುಷ್ಕೃತ್ಯ ಎಸಗಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಗಂಗೋಂಡನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ಈ ಒಂದು ಕೃತ್ಯ ಎಸಗಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಎಸ್ ಪಿ ಸಿ.ಕೆ ಬಾಬಾ ಹೇಳಿಕೆ ನೀಡಿದ್ದಾರೆ.
ಪಿಣ್ಯ ಪೊಲೀಸರ ಇನ್ಫಾರ್ಮರ್ಸ್ ಎಂದು ಆರೋಪಿಗಳು ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿ ಗಾಂಜಾ ಮಾರಾಟ, ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ದಾಳಿ ಮಾಡಿದ್ದಾರೆ. ಮನೆಗೆ ನುಗ್ಗಿ ಸಂತ್ರಸ್ತ ಮಹಿಳೆಯ 14 ವರ್ಷದ ಮಗನ ಮೇಲೆ ಹಲ್ಲೆ ಮಾಡಿದ್ದಾರೆ. ಮನೆಯಲ್ಲಿದ್ದ ಮಕ್ಕಳು, ಸಂತ್ರಸ್ತೆಯ ಸ್ನೇಹಿತೆಯ ಮೇಲು ಹಲ್ಲೆ ನಡೆಸಿದ್ದಾರೆ. ಹಲ್ಲೆಯ ಬಳಿಕ ಪಕ್ಕದ ಮನೆಯ ರೂಮ್ಗೆ ಎಳೆದೋಯ್ದು ರೇಪ್ ಮಾಡಿದ್ದಾರೆ.
ಇಬ್ಬರು ಪುರುಷರನ್ನು ಕಟ್ಟಿಹಾಕಿ ಹಲ್ಲೆ ನಡೆಸಿ ಐವರು ಕೃತ್ಯ ಎಸೆಗಿದ್ದಾರೆ. ಮಾಹಿತಿ ಬಂದ ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ. ಸಂತ್ರಸ್ತ ಮಹಿಳೆಯ ಮೊಬೈಲ್ ಮತ್ತು ಐವತ್ತು ಸಾವಿರ ನಗದು ಸಹ ದೋಚಿದ್ದಾರೆ. ಗ್ಯಾಂಗ್ ರೇಪ್ ಮತ್ತು ರಾಬರಿ ಕೇಸ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಹಲ್ಲೆಗೆ ಒಳಗಾದಂತಹ ಇಬ್ಬರನ್ನು ಸದ್ಯ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾಮೂಹಿಕ ಅತ್ಯಾಚಾರ ಎಸಗಿದ್ದ ಪೈಕಿ ಮೂವರನ್ನು ಅರೆಸ್ಟ್ ಮಾಡಲಾಗಿದೆ. ಉಳಿದ ಇಬ್ಬರು ಆರೋಪಿಗಳಿಗಾಗಿ ಮೂರು ತಂಡಗಳು ಹುಡುಕಾಟ ನಡೆಸುತ್ತಿವೆ. ಪ್ರಕರಣ ಗಂಭೀರ ಆಗಿರುವುದರಿಂದ ನೆಲಮಂಗಲ ಡಿವೈಎಸ್ಪಿ ಇಂದ ತನಿಖೆಗೆ ಆದೇಶ ಬಂದಿದ್ದು, ಕೆಲವರ ಫೋಟೋ ತೋರಿಸಿದರೆ ಹೆಸರು ಸಮೇತವಾಗಿ ಹೇಳುತ್ತಿದ್ದಾರೆ. ಆರೋಪಿಗಳು ಪರಿಚಯ ಇದ್ದಾರ ಅಥವಾ ಇಲ್ಲವಾ ಎಂಬುದರ ಬಗ್ಗೆ ತನಿಖೆ ನಡೆದಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ ಪಿ ಸಿ ಕೆ ಬಾಬಾ ಹೇಳಿಕೆ ನೀಡಿದರು.
ಇಬ್ಬರ ಗುರುತು ಹಿಡಿದು ಸಂತ್ರಸ್ತ ಕುಟುಂಬ ಪೊಲೀಸರಿಗೆ ಮಾಹಿತಿ ನೀಡಿದೆ. ಘಟನೆಯ ವೇಳೆ ಸಂತ್ರಸ್ತ ಮಹಿಳೆಯ ಪುತ್ರ 112ಕ್ಕೆ ಕರೆ ಮಾಡಿದ್ದ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಉಳಿದ ಈ ಇಬ್ಬರಿಗಾಗಿ ಮಾದನಾಯಕನಹಳ್ಳಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.