ಬೆಂಗಳೂರು : ಬ್ಯಾಂಕ್ ವ್ಯವಹಾರಗಳಲ್ಲಿ ನಾವು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಕೂಡ ಕೆಲವೊಂದು ಬಾರಿ ಸೈಬರ್ ವಂಚಕರಿಗೆ ನಮಗೆ ಗೊತ್ತಿಲ್ಲದಂತೆ ಮೋಸ ಹೋಗಿರುತ್ತೇವೆ. ಇದೀಗ ಖಾಸಗಿ ಕಂಪನಿಯ ಕೆಲಸಕ್ಕೆಂದು ಸಂದರ್ಶನ ಕೊಟ್ಟ ಯುವತಿಗೆ ಫೀಡ್‌ಬ್ಯಾಕ್ ನೆಪದಲ್ಲಿ ಒಟಿಪಿ ಪಡೆದು ಬರೋಬ್ಬರಿ 5.94 ಲಕ್ಷ ರೂ. ಸಾಲ ಪಡೆದು ಸೈಬರ್ ಕಳ್ಳರು ವಂಚಿಸಿದ್ದಾರೆ.
ಹೌದು ಬೆಂಗಳೂರಿನ ಜಯನಗರ 4ನೇ ಹಂತ ಟಿ ಬ್ಲಾಕ್‌ನಲ್ಲಿ ನೆಲೆಸಿರುವ 28 ವರ್ಷದ ಯುವತಿ ವಂಚನೆಗೆ ಒಳಗಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈಕೆ ಕೊಟ್ಟ ದೂರಿನ ಮೇರೆಗೆ ದಕ್ಷಿಣ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
2023ರ ಮೇನಲ್ಲಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಯುವತಿಗೆ ಜಯನಗರದ ಖಾಸಗಿ ಹೋಟೆಲ್‌ನಲ್ಲಿ ಸಂದರ್ಶನ ಇರುವುದಾಗಿ ಆಹ್ವಾನಿಸಿದ್ದರು. ಅಲ್ಲಿಗೆ ಹೋದಾಗ ಮಹೇಶ್ ಎಂಬಾತ ಸಂದರ್ಶನ ನಡೆಸಿ ಕಳುಹಿಸಿದ್ದ. ಎರಡು ದಿನಗಳ ಬಳಿಕ ಯುವತಿಗೆ ಕರೆ ಮಾಡಿದ ಮಹೇಶ್, ಸಂದರ್ಶನ ಸಂಬಂಧ ಫೀಡ್‌ಬ್ಯಾಕ್ ಕೊಡಬೇಕು. ಅದಕ್ಕಾಗಿ ನಿಮ್ಮ ಮೊಬೈಲ್‌ಗೆ ಒಟಿಪಿ ಬರಲಿದೆ. ಅದನ್ನು ಹೇಳುವಂತೆ ಯುವತಿ ಕಡೆಯಿಂದ ಒಟಿಪಿ ಪಡೆದ ಮಹೇಶ್, ಆಕೆಯ ಹೆಸರಿನಲ್ಲಿ ಖಾಸಗಿ ಬ್ಯಾಂಕ್‌ನಿಂದ ಸಾಲ ಪಡೆದು ಅದರಲ್ಲಿ 51 ಸಾವಿರ ರೂ. ಕನ್ನ ಹಾಕಿದ್ದ.
ಬ್ಯಾಂಕ್ ಖಾತೆಯಿಂದ ಹಣ ಕಡಿತವಾದ ಸಂದೇಶ ನೋಡಿದ ಯುವತಿ, ಗಾಬರಿಯಾಗಿ ಮಹೇಶ್‌ಗೆ ಕರೆ ಮಾಡಿ ಪ್ರಶ್ನಿಸಿದ್ದಾರೆ. ಅದಕ್ಕೆ ನನ್ನಿಂದ ತಪ್ಪಾಗಿದ್ದು, ನಿಮ್ಮ ಹಣವನ್ನು ಹಿಂತಿರುಗಿಸುತ್ತೆನೆ. ಕೆಲ ದಿನಗಳ ಕಾಲವಕಾಶ ಬೇಕೆಂದು ಕೇಳಿದ್ದ. ಇದಾದ ಮೇಲೆ ಎರಡು ದಿನ ಬಿಟ್ಟು ಕರೆ ಮಾಡಿದ ಮಹೇಶ್, ನಿಮ್ಮ ಹಣವನ್ನು ವಾಪಸ್ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕಾಗಿದೆ. ಆದರಿಂದ ಮತ್ತೆ ನಿಮ್ಮ ಮೊಬೈಲ್‌ಗೆ ಬರುವ ಒಟಿಪಿ ನಂಬರ್ ಹೇಳುವಂತೆ ಸಬೂಬು ಹೇಳಿದ್ದಾನೆ.
ಇದನ್ನು ನಂಬಿದ ಯುವತಿ, ತನ್ನ ಮೊಬೈಲ್‌ಗೆ ಬಂದ ಒಟಿಪಿಗಳನ್ನು ಹಲವು ಬಾರಿ ನೀಡಿದ್ದು, ಹಂತ ಹಂತವಾಗಿ ಒಟ್ಟು 5.94 ಲಕ್ಷ ರೂ. ವರ್ಗಾವಣೆ ಮಾಡಿಕೊಂಡಿದ್ದಾನೆ. 2024ರ ಮೇ 13ರಂದು ಆಕ್ಸಿಸ್ ಬ್ಯಾಂಕ್ ಸಿಬ್ಬಂದಿ ಯುವತಿ ಮನೆಗೆ ಬಂದು ಸಾಲದ ಕತ್ತು ಪಾವತಿ ಮಾಡಿಲ್ಲ. ಬಾರಿ ಉಳಿದಿದೆ ಎಂದು ಕೇಳುತ್ತಾನೆ. ಗಾಬರಿಗೊಂಡ ಯುವತಿ, ಯಾವಾಗಾ ಎಂದು ಪರಿಶೀಲನೆ ನಡೆಸಿದಾಗ ಮಹೇಶ್ ಮೋಸ ಮಾಡಿದ್ದಾನೆ ಎಂದು ಯುವತಿಗೆ ಗೊತ್ತಾಗಿದೆ. ತಕ್ಷಣ ದಕ್ಷಿಣ ಸಿಇಎನ್ ಠಾಣೆಗೆ ದೂರು ನೀಡಿದ್ದಾಳೆ ಪೊಲೀಸರು ಈಗ ತನಿಖೆ ಕೈಗೊಂಡಿದ್ದಾರೆ.