ಬೆಂಗಳೂರು: ಬೆಂಗಳೂರಿನಲ್ಲಿ ಮಳೆ ನಡುವೆ ಕಳ್ಳರ ಕಾಟ ಜಾಸ್ತಿಯಾಗಿದ್ದು, ಈ ನಡುವೆ ಮಳೆಯಿಂದಾಗಿ ಮನೆ ಸಂಬಂಧಿಕರ ಮನೆಗೆ ಹೋಗಿದ್ದವರ ಮನೆ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಬೆಳ್ಳಂದೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರೈನ್ಬೋ ಲೇಔಟ್ನ ಮೂರು ಮನೆಗಳ ಬಾಲ್ಕನಿಂದ ಇಳಿದು ಮನೆಯಲ್ಲಿದ್ದ ಚಿನ್ನ, ಬೆಳ್ಳಿ, ಡೈಮಂಡ್ಗಳನ್ನು ಲೂಟಿ ಮಾಡಿದ್ದಾರೆ ಎನ್ನಲಾಗಿದೆ.
ಮಳೆಯ ಪ್ರಮಾಣ ಕಡಿಮೆಯಾದ ಬಳಿಕ ಮನೆಗೆ ವಾಪಸ್ಸು ಬಂದ ಬಳಿಕ ನೋಡಿದ ವೇಳೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ಪೋಲಿಸರಿಗೆ ದೂರು ನೀಡಲಾಗಿದೆ ಎನ್ನಲಾಗಿದೆ. ಸದ್ಯ ಪ್ರಕರಣ ಬೆಳ್ಳಂದೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಈ ನಡುವೆ ಬೆಳ್ಳಂಬೆಳಗ್ಗೆ ರಾಜಕಾಲುವೆಗಳ ಒತ್ತುವರಿಯ ಕೆಲಸವನ್ನು ಬಿಬಿಎಂಪಿ ಮುಂದಾಗಿದ್ದು, ನೀರು ಹರುವಿಕೆಯನ್ನು ಸರಾಗವಾಗಿ ಮಾಡುವ ನಿಟ್ಟಿನಲ್ಲಿ ಮುಂದಾಗಿದ್ದು, ಹಲವು ಭಾಗಗಳಲ್ಲಿ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಮೈದಾನ, ಕಟ್ಟಡವನ್ನು ನಿರ್ಮಾಣ ಮಾಡಿಕೊಂಡಿದ್ದರು, ಇದರಿಂದ ನೀರಿನ ಹರಿವು ಆಗುತ್ತ ಇರಲಿಲ್ಲ, ಹೀಗಾಗಿ ಇಂದು ಅಧಿಕಾರಿಗಳು ತೆರುವಿನ ಕಾರ್ಯವನ್ನು ಮಾಡುತ್ತಿದ್ದಾರೆ.