ಬೆಂಗಳೂರು : ಬೆಂಗಳೂರಿನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅನೇಕ ಪ್ರದೇಶಗಳು ಜಲಾವೃತಗೊಂಡಿವೆ. ಸಂಕಷ್ಟದ ಕಾಲದಲ್ಲಿ ಸರಕಾರ ಹಾಗು ನಾಗರಿಕರು ಒಟ್ಟಾಗಿ ಸವಾಲನ್ನು ಎದುರಿಸಬೇಕೆಹೊರತು ನಿಂದಿಸುವ ಸಮಯವಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸುಧಾಕರ್, ಇತಿಹಾಸದಲ್ಲಿ ಕಂಡರಿಯದ ರೌದ್ರಾವತಾರತಾಳಿದ ಮಳೆಯಿಂದ ಬೆಂಗಳೂರು ಅಸ್ಥವ್ಯಸ್ತವಾಗಿರುವಿದು ಸತ್ಯ. ಈ ಸಂಕಷ್ಟದ ಕಾಲದಲ್ಲಿ ಸರಕಾರ ಹಾಗು ನಾಗರಿಕರು ಒಟ್ಟಾಗಿ ಸವಾಲನ್ನು ಎದುರಿಸಬೇಕೆಹೊರತು ನಿಂದಿಸುವ ಸಮಯವಲ್ಲ. ಈ ರೀತಿಯ ಮಳೆ ಪ್ರಪಂಚದ ಯಾವುದೇ ನಗರದ್ಲಲಿ ಬಿದ್ದಿದ್ದೇ ಆದಲ್ಲಿ ಪರಿಸ್ಥಿತಿ ಇದಕ್ಕಿನ್ನ ಭಿನ್ನವಾಗಿರುವುದಿಲ್ಲ.
ಇತಿಹಾಸದಲ್ಲಿ ಕಂಡರಿಯದ ರೌದ್ರಾವತಾರತಾಳಿದ ಮಳೆಯಿಂದ ಬೆಂಗಳೂರು ಅಸ್ಥವ್ಯಸ್ತವಾಗಿರುವಿದು ಸತ್ಯ. ಈ ಸಂಕಷ್ಟದ ಕಾಲದಲ್ಲಿ ಸರಕಾರ ಹಾಗು ನಾಗರಿಕರು ಒಟ್ಟಾಗಿ ಸವಾಲನ್ನು ಎದುರಿಸಬೇಕೆಹೊರತು ನಿಂದಿಸುವ ಸಮಯವಲ್ಲ. ಈ ರೀತಿಯ ಮಳೆ ಪ್ರಪಂಚದ ಯಾವುದೇ ನಗರದ್ಲಲಿ ಬಿದ್ದಿದ್ದೇ ಆದಲ್ಲಿ ಪರಿಸ್ಥಿತಿ ಇದಕ್ಕಿನ್ನ ಭಿನ್ನವಾಗಿರುವುದಿಲ್ಲ. ಮುಖ್ಯಮಂತ್ರಿ 1/3
— Dr Sudhakar K (@mla_sudhakar) September 5, 2022
ಸಿಎಂ ಬಸವರಾಜ ಬೊಮ್ಮಾಯಿ ಯವರು ಹಾಗು ಬೆಂಗಳೂರಿನ ಸಚಿವರುಗಳು, ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗು ವಿವಿಧ ಸಂಘಸಂಸ್ಥೆಗಳು ಸಕ್ರಿಯವಾಗಿ ಹಗಲಿರಳು ಶ್ರಮಿಸುತ್ತಿದ್ದಾರೆ. ನಮ್ಮ ಕೆಂಪೇಗೌಡರು ಕಟ್ಟಿದ ಸುಂದರ ಹಾಗು ಎಲ್ಲರನ್ನೊಳಗಂಡ ಚಿಕ್ಕದಾದ ಹಾಗು ಚೊಕ್ಕದಾದ ಬೆಂಗಳೂರು ಇವತ್ತು ಅಭಿವೃದ್ಧಿಯ ಹೆಸರಲ್ಲಿ ಬೃಹತ್ ಮಹಾನಗರ ಆಗಿದೆ.
ಬೊಮ್ಮಾಯಿ ಯವರು ಹಾಗು ಬೆಂಗಳೂರಿನ ಸಚಿವರುಗಳು, ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗು ವಿವಿಧ ಸಂಘಸಂಸ್ಥೆಗಳು ಸಕ್ರಿಯವಾಗಿ ಹಗಲಿರಳು ಶ್ರಮಿಸುತ್ತಿದ್ದಾರೆ. ನಮ್ಮ ಕೆಂಪೇಗೌಡರು ಕಟ್ಟಿದ ಸುಂದರ ಹಾಗು ಎಲ್ಲರನ್ನೊಳಗಂಡ ಚಿಕ್ಕದಾದ ಹಾಗು ಚೊಕ್ಕದಾದ ಬೆಂಗಳೂರು ಇವತ್ತು ಅಭಿವೃದ್ಧಿಯ ಹೆಸರಲ್ಲಿ ಬೃಹತ್ ಮಹಾನಗರ ಆಗಿದೆ. ಆಗ ನಿರ್ಮಿಸಿದ 2/3
— Dr Sudhakar K (@mla_sudhakar) September 5, 2022
ಕೆರೆಗಳು ಇಂದು ಒತ್ತುವರಿಯಾಗಿ ಮಾಯವಾಗಿದೆ. ರಾಜಕಾಲುವೆಗಳ ಮೇಲೆ ಮನೆಗಳು ಮಳಿಗೆಗಳು ನಿರ್ಮಾಣವಾಗಿದೆ. ಕೆಲವು ಕೆರೆಗಳ ಅಂಗಳದಲ್ಲಿ, ತಗ್ಗು ಪ್ರದೇಶದಲ್ಲಿ ಮನೆಗಳ ಲೇಔಟ್ ನಿರ್ಮಾಣಮಾಡಿಕೊಡಿದ್ದಾರೆ. ಇಂತ ಬಳುವಳಿಯನ್ನ ನಮ್ಮ ಸರ್ಕಾರ ಪಡೆದಿದೆ. ಆದರೂ ನಮ್ಮ ಸರಕಾರ ಇದನ್ನು ಸವಾಲಾಗಿ ಸ್ವೀಕರಿಸಿ ಶೀಘ್ರ ಶಾಶ್ವತ ಪರಿಹಾರವನ್ನು ನೀಡ್ತೇವಿ ಎಂದು ಹೇಳಿದ್ದಾರೆ.
ಕೆರೆಗಳು ಇಂದು ಒತ್ತುವರಿಯಾಗಿ ಮಾಯವಾಗಿದೆ. ರಾಜಕಾಲುವೆಗಳ ಮೇಲೆ ಮನೆಗಳು ಮಳಿಗೆಗಳು ನಿರ್ಮಾಣವಾಗಿದೆ. ಕೆಲವು ಕೆರೆಗಳ ಅಂಗಳದಲ್ಲಿ, ತಗ್ಗು ಪ್ರದೇಶದಲ್ಲಿ ಮನೆಗಳ ಲೇಔಟ್ ನಿರ್ಮಾಣಮಾಡಿಕೊಡಿದ್ದಾರೆ. ಇಂತ ಬಳುವಳಿಯನ್ನ ನಮ್ಮ ಸರ್ಕಾರ ಪಡೆದಿದೆ. ಆದರೂ ನಮ್ಮ ಸರಕಾರ ಇದನ್ನು ಸವಾಲಾಗಿ ಸ್ವೀಕರಿಸಿ ಶೀಘ್ರ ಶಾಶ್ವತ ಪರಿಹಾರವನ್ನು ನೀಡ್ತೇವಿ. 3/3
— Dr Sudhakar K (@mla_sudhakar) September 5, 2022
ಅವೈಜ್ಞಾನಿಕವಾಗಿ ನೂರಾರು ಹಳ್ಳಿಗಳನ್ನು ಗ್ರೇಟರ್ ಬೆಂಗಳೂರಿಗೆ ಸೇರಿಸಿ ಯಾವುದೇ ಅಭಿವೃದ್ದಿಯನ್ನ ಈ ಗ್ರಾಮಗಳಲ್ಲಿ ಮಾಡದಿರುವುದು ಯಾರ ತಪ್ಪು ? ಇನ್ನು ಮೋಹನದಾಸ್ ಪೈ ಯವರೇ ಈ ಪರಿಯ ಮಳೆ ನ್ಯೂಯೋರ್ಕ್ ನಲ್ಲಿ ಬಿದ್ದಿದ್ರೆ ಏನಾಗ್ತಾಯಿತ್ತು? ಸಹನೆ ಹಾಗು ಸತ್ಯಾನ್ವೇಷಣೆಗೆ ಮನ್ನಣೆ ಕೊಡಿ. ದೂರುವುದು ಸುಲಭ ಪರಿಹರಿಸುವುದು ದೂರದ ಮಾತು ಎಂದು ಹೇಳಿದ್ದಾರೆ.
ಅವೈಜ್ಞಾನಿಕವಾಗಿ ನೂರಾರು ಹಳ್ಳಿಗಳನ್ನು ಗ್ರೇಟರ್ ಬೆಂಗಳೂರಿಗೆ ಸೇರಿಸಿ ಯಾವುದೇ ಅಭಿವೃದ್ದಿಯನ್ನ ಈ ಗ್ರಾಮಗಳಲ್ಲಿ ಮಾಡದಿರುವುದು ಯಾರ ತಪ್ಪು ? ಇನ್ನು ಮೋಹನದಾಸ್ ಪೈ ಯವರೇ ಈ ಪರಿಯ ಮಳೆ ನ್ಯೂಯೋರ್ಕ್ ನಲ್ಲಿ ಬಿದ್ದಿದ್ರೆ ಏನಾಗ್ತಾಯಿತ್ತು? ಸಹನೆ ಹಾಗು ಸತ್ಯಾನ್ವೇಷಣೆಗೆ ಮನ್ನಣೆ ಕೊಡಿ. ದೂರುವುದು ಸುಲಭ ಪರಿಹರಿಸುವುದು ದೂರದ ಮಾತು 4/6
— Dr Sudhakar K (@mla_sudhakar) September 5, 2022
ಇವು ಜಾಗತಿಕ ತಾಪಮಾನ ವ್ಯಪರೀತ್ಯದ ಕೆಲವು ಕೊಡುಗೆಗಳು. ಹಾಗಾಗಿ ನಾವೆಲ್ಲಾ ಒಟ್ಟಾಗಿ ಉತ್ತಮ ಹಾಗು ನಿರ್ಮಲವಾದ ಪರಿಸರಪೂರಕ ನಗರಾಭಿವೃದ್ದಿಗೆ ನಾಂದಿಹಾಡೋಣ. ಪ್ರಕೃತಿ ನಮ್ಮ ಅಗತ್ಯಗಳಿಗೆ ಎಲ್ಲವು ಕೊಡುತ್ತೆ ಆದರೆ ನಮ್ಮ ದುರಾಸೆಗೆ ಅದರ ವಿಕೃತಿಯ ದರ್ಶನವಾಗುತ್ತೆ. ಎಚ್ಚರ…ಎಚ್ಚರ ಎಂದು ಹೇಳಿದ್ದಾರೆ.
ಇವು ಜಾಗತಿಕ ತಾಪಮಾನ ವ್ಯಪರೀತ್ಯದ ಕೆಲವು ಕೊಡುಗೆಗಳು. ಹಾಗಾಗಿ ನಾವೆಲ್ಲಾ ಒಟ್ಟಾಗಿ ಉತ್ತಮ ಹಾಗು ನಿರ್ಮಲವಾದ ಪರಿಸರಪೂರಕ ನಗರಾಭಿವೃದ್ದಿಗೆ ನಾಂದಿಹಾಡೋಣ. ಪ್ರಕೃತಿ ನಮ್ಮ ಅಗತ್ಯಗಳಿಗೆ ಎಲ್ಲವು ಕೊಡುತ್ತೆ ಆದರೆ ನಮ್ಮ ದುರಾಸೆಗೆ ಅದರ ವಿಕೃತಿಯ ದರ್ಶನವಾಗುತ್ತೆ. ಎಚ್ಚರ…ಎಚ್ಚರ… (6/6)
— Dr Sudhakar K (@mla_sudhakar) September 5, 2022