ಬೆಂಗಳೂರು: ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಡಿ.21ರಂದು ಚುನಾವಣೆ ನಡೆಯಲಿದ್ದು, ಈ ಬಾರಿಯ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತಿರುವುದರಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ನೂತನ ವಿಧಾನಪರಿಷತ್ ಸಭಾಪತಿ ಚುನಾವಣೆ ನಡೆಯಲಿದೆ.
ಸಚಿವ ಸಂಪುಟ ಸಭೆಯಲ್ಲಿ ಸಭಾಪತಿ ಚುನಾವಣೆ ನಡೆಸಲು ರಾಜ್ಯಪಾಲರಿಗೆ ಮನವಿ ಮಾಡಿಕೊಳ್ಳಲಾಗಿತ್ತು, ಇದೇ ವೇಳೆ ರಾಜ್ಯಪಾಲರು ಡಿಸೆಂಬರ್ 21ರಂದು ಪರಿಷತ್ ಸಭಾಪತಿ ಚುನಾವಣೆ ನಡೆಸುವಂತೆ ಆದೇಶ ಹೊರಡಿಸಿರುವ ಹಿನ್ನಲೆಯಲ್ಲಿ ಡಿಸೆಂಬರ್ 21ರಂದು ಚುನಾವಣೆ ನಡೆಯಲಿದೆ.
ಜೆಡಿಎಸ್ ಬಿಟ್ಟು ಬಿಜೆಪಿಗೆ ಹೋಗಿ ಸದ್ಯ ವಿಧಾನಪರಿಷತ್ ಸದ್ಯಸರಾಗಿರುವ ಬಸವರಾಜ ಹೊರಟ್ಟಿ ಮತ್ತೆ ಸಭಾಪತಿ ಆಗಿ ಆಯ್ಕೆ ಆಗುವ ಸಂಭವ ಹೆಚ್ಚಿದೆ. ಇದಲ್ಲದೇ ಕುರುಬ ಸಮುದಾಯ ರಘುನಾಥ್ ರಾವ್ ಮಲ್ಕಾಪುರೆ ಅವರನ್ನು ಸಭಾಪತಿ ಸ್ಥಾನದಲ್ಲಿ ಇರಲಿ ಅಂತ ಹಲವು ಮಂದಿ ಈಗಾಗಲೇ ಪಾರ್ಟಿ ಮುಂಖಡರಿಗೆ ಮನವಿ ಮಾಡಿದ್ದಾರೆ. ಆದರೆ ಬಿಜೆಪಿಗೆ ಸೇರುವ ಮುನ್ನವೇ ಕಂಡಿಶನ್ ಹಾಕಿ ಬಂದಿರುವ ಹೊರಟ್ಟಿ ಸಹಜವಾಗಿಯೇ ಸಭಾಪತಿ ಸ್ಥಾನದ ಮೇಲೆ ಆಸೆ ಇಟ್ಟಿರುವುದು ಸುಳ್ಳಲ್ಲ.
ಅಂದ ಹಾಗೇ ಒಟ್ಟು 75 ಸ್ಥಾನಗಳನ್ನು ಒಳಗೊಂಡಿರುವ ವಿಧಾನಪರಿಷತ್ನಲ್ಲಿ ಆಡಳಿತರೂಢ ಬಿಜೆಪಿ 39, ವಿರೋಧ ಪಕ್ಷ ಕಾಂಗ್ರೆಸ್ 26 ಹಾಗೂ ಜೆಡಿಎಸ್ 8 ವಿಧಾನಪರಿಷತ್ ಸದ್ಯಸರನ್ನು ಹೊಂದಿದೆ.