ಬೆಂಗಳೂರು : ನಿಮ್ಮ ಹೆಸರಿನಲ್ಲಿ ರವಾನೆಯಾದ ಪಾರ್ಸೆಲ್ನಲ್ಲಿ ಮಾದಕ ವಸ್ತು ಇದೆ ಎಂದು ಕರೆ ಮಾಡಿ ವಂಚಿಸುವ ಸೈಬರ್ ವಂಚಕರ ಪ್ರಕರಣಗಳು ಹೆಚ್ಚುತ್ತಿವೆ ಇದೀಗ ಅಮೃತಹಳ್ಳಿಯ ಸಾಫ್ಟ್ವೇರ್ ಎಂಜಿನಿಯರ್ ಒಟ್ಟು 2.24 ಕೋಟಿ ಹಣ ಕಳೆದುಕೊಂಡಿದ್ದಾರೆ.
ಹೌದು ಸಾಫ್ಟ್ವೇರ್ ಎಂಜಿನಿಯರ್ಗೆ ಕೆಲ ದಿನಗಳ ಹಿಂದೆ ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ, ನಿಮ್ಮ ಹೆಸರಿಗೆ ಬಂದಿರುವ ಪಾರ್ಸೆಲ್ ಅನ್ನು ದಿಲ್ಲಿಯಲ್ಲಿ ಜಪ್ತಿ ಮಾಡಲಾಗಿದೆ. ಅದರಲ್ಲಿ ನಿಮ್ಮ ಪಾಸ್ಪೋರ್ಟ್, ಎಟಿಎಂ ಕಾರ್ಡ್ಗಳು ಮತ್ತು ಎಂಡಿಎಂಎ ಮಾದಕ ವಸ್ತುವಿದೆ, ಎಂದು ಸುಳ್ಳು ಹೇಳಿ ಬೆದರಿಸಿದ್ದ.
ಲೋಕಸಭಾ ಚುನಾವಣೆ 2024: ಕಾಶ್ಮೀರಿ ವಲಸಿಗ ಮತದಾರರಿಗೆ ಮತದಾನ ಪ್ರಕ್ರಿಯೆ ಮಾರ್ಪಡಿಸಿದ ಚುನಾವಣಾ ಆಯೋಗ
ನಂತರ ಪಾರ್ಸೆಲ್ನಲ್ಲಿ ಮಾದಕ ವಸ್ತು ಇರುವುದು ಆ್ಯಂಟಿ ನಾರ್ಕೊಟಿಕ್ ಬ್ಯೂರೊಗೆ ಗೊತ್ತಾಗಿದೆ. ಆ ಪಾರ್ಸೆಲ್ ನಿಮಗೆ ಸೇರಿರದಿದ್ದರೆ ದೂರು ಕೊಡಬಹುದು. ದೂರು ದಾಖಲಿಸಲು ಸ್ಕೈಪ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ, ಎಂದು ಆ ವಂಚಕ ಸೂಚಿಸಿದ್ದ.ಆತನ ಸೂಚನೆಯಂತೆ ಇದನ್ನು ನಿಜವೆಂದು ನಂಬಿದ ಟೆಕ್ಕಿಯು ಸ್ಕೈಪ್ ಆ್ಯಪ್ ಡೌನ್ಲೋಡ್ ಮಾಡಿಕೊಂಡಿದ್ದರು.
ನಂತರ ಆಪ್ ನಲ್ಲಿ ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಂಡ ವ್ಯಕ್ತಿಯು ನಿಮ್ಮ ವಿರುದ್ಧ ಅಕ್ರಮ ಹಣ ವರ್ಗಾವಣೆ ದೂರು ಕೂಡ ಇದೆ. ಈ ಬಗ್ಗೆ ಸಿಬಿಐ ಅಧಿಕಾರಿಗಳು ತನಿಖೆ ಮಾಡುತ್ತಾರೆ. ಈ ಪ್ರಕರಣವನ್ನು ಮುಕ್ತಾಯಗೊಳಿಸಲು ಹಣ ಕೊಡಬೇಕೆಂದು ಬೆದರಿಸಿದ್ದ.
ನಿಮ್ಮನ್ನು ಅನುಮಾನಿಸಬೇಡಿ, ಜಗತ್ತಿಗೆ ನಿಮ್ಮ ಅಗತ್ಯವಿದೆ: ಅಮೆರಿಕಕ್ಕೆ ಜಪಾನ್ ಪ್ರಧಾನಿ ಮನವಿ
ಇದರಿಂದ ಕಂಗಾಲಾದ ಸಾಫ್ಟ್ವೇರ್ ಎಂಜಿನಿಯರ್, ಹಂತ- ಹಂತವಾಗಿ ವಂಚಕರ 8 ಬ್ಯಾಂಕ್ ಖಾತೆಗಳಿಗೆ 2.42 ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ.ಕೆಲ ದಿನಗಳ ಬಳಿಕ ಟೆಕ್ಕಿಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ನಂತರ ಅವರು ಈಶಾನ್ಯ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.