ಬೆಂಗಳೂರು: ಸಿಲಿಕಾನ್ ಸಿಟಿಯ ಶಿವಾನಂದ ಸ್ಟೀಲ್ ಸೇತುವೆ ಮೇಲೆ ವಾಹನ ಸಂಚಾರ ಆರಂಭವಾದ ಎರಡೇ ದಿನಕ್ಕೆ ಬ್ರಿಡ್ಜ್ ನಲ್ಲಿ ಭಾರೀ ವೈಬ್ರೇಷನ್ ಕಾಣಿಸಿಕೊಂಡಿದ್ದರಿಂದ ಭಾರೀ ವಾಹನಗಳ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ
BIG NEWS: ಹೆರಿಗೆ ವೇಳೆ ಮಗು ಮೃತಪಟ್ಟರೆ ಮಹಿಳಾ ನೌಕರರಿಗೆ 60 ದಿನ ವಿಶೇಷ ರಜೆ: ಕೇಂದ್ರ ಸರ್ಕಾರ
ಐಟಿಸಿಟಿ ಜನರು ಟ್ರಾಫಿಕ್ ಕಿರಿಕಿರ ತಪ್ಪಿಸೋದಕ್ಕೆ ನಿರ್ಮಾಣವಾದ ಶಿವಾನಂದ ಸರ್ಕಲ್ ಸ್ಟೀಲ್ ಸೇತುವೆ ವಿಚಾರದಲ್ಲಿ ಬಿಬಿಎಂಪಿ ಅಧಿಕಾರಿಗಳ ನಡೆ ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ.
ಸೇತುವೆ ಮೇಲೆ ವಾಹನ ಸಂಚಾರ ಆರಂಭವಾದ ಎರಡೇ ದಿನಕ್ಕೆ ವೈಬ್ರೇಷನ್ ಕಾರಣ ಅದನ್ನು ಬಂದ್ ಮಾಡಿತ್ತು. ಈಗ ಘನ ವಾಹನ ಓಡಾಡದಂತೆ ಫ್ಲೈಓವರ್ ಮೇಲೆ ಹೈಟ್ ಲಿಮಿಟ್ ಗ್ಯಾಂಟ್ರಿಯನ್ನು ಅಳವಡಿಸಲಾಗಿದೆ
BIG NEWS: ಹೆರಿಗೆ ವೇಳೆ ಮಗು ಮೃತಪಟ್ಟರೆ ಮಹಿಳಾ ನೌಕರರಿಗೆ 60 ದಿನ ವಿಶೇಷ ರಜೆ: ಕೇಂದ್ರ ಸರ್ಕಾರ
ಈ ನಿರ್ಧಾರದಿಂದ ಬಸ್ಸು, ಲಾರಿ, ಟ್ರಕ್ ಓಡಾಡುವಂತೆ ಇಲ್ಲ. ಕೇವಲ ಬೈಕ್, ಕಾರು ಮಾತ್ರ ಸಂಚರಿಸಲು ಬಿಬಿಎಂಪಿ ಅವಕಾಶ ಮಾಡಿಕೊಟ್ಟಿದೆ.
BIG NEWS: ಹೆರಿಗೆ ವೇಳೆ ಮಗು ಮೃತಪಟ್ಟರೆ ಮಹಿಳಾ ನೌಕರರಿಗೆ 60 ದಿನ ವಿಶೇಷ ರಜೆ: ಕೇಂದ್ರ ಸರ್ಕಾರ
ಹೊಸ ಬ್ರಿಡ್ಜ್ ಮೇಲೆ ಏಕಾಏಕಿ “ಘನ ವಾಹನಗಳ ಪ್ರವೇಶಕ್ಕೆ ನಿಷೇಧ” ಹೇರಿದರಿಂದ ಕಳಪೆ ಕಾಮಗಾರಿ ಆರೋಪ ಬಂದಿದೆ. ಜನರ ಆಕ್ರೋಶದ ಬೆನ್ನಲ್ಲೇ ಬಿಬಿಎಂಪಿ ಗುಣಮಟ್ಟ ಪರೀಕ್ಷೆಗಾಗಿ ಭಾರತೀಯ ವಿಜ್ಞಾನ ಸಂಸ್ಥೆಯ ಮೊರೆ ಹೋಗಿದೆ.