ಬೆಂಗಳೂರು : ಅಂಗಡಿಯಲ್ಲಿ ಜೋರಾಗಿ ಹಾಡು ಹಾಕಿದ್ದರಿಂದ ಪ್ರಾರ್ಥನೆ ಮಾಡಲು ಅಡ್ಡಿಯಾಗುತ್ತೇ ಎಂದು ಆರೋಪಿಸಿ ಅಂಗಡಿ ಮಾಲೀಕನ ಮೇಲೆ ಹಲವು ದುಷ್ಕರ್ಮಿಗಳು ಚಾಕು ಇರಿದು ಹಲ್ಲೆ ಮಾಡಿರುವ ಘಟನೆ ಬೆಂಗಳೂರು ನಗರದ ಹಲಸೂರು ಗೇಟ್ ಬಳಿಯ ನಗರ್ತಪೇಟೆಯಲ್ಲಿ ನಡೆದಿದೆ.
`ನೀತಿ ಸಂಹಿತೆ’ ಉಲ್ಲಂಘನೆ : `ಪ್ರಧಾನಿ ಮೋದಿ’ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಟಿಎಂಸಿ ಸಂಸದ!
ಹಲ್ಲೆಗೊಳಗಾದ ಮುಖೇಶ್ ಎಂಬವರು ನಗರ್ತಪೇಟೆಯಲ್ಲಿ ಕೃಷ್ಣ ಟೆಲಿಕಾಂ ಮೊಬೈಲ್ ಅಂಗಡಿ ಮಾಲೀಕರರು. ಇವರು ನೀಡಿದ ದೂರಿನ ಮೇರೆಗೆ ಸುಲೇಮಾನ್, ಶಹನವಾಜ್, ರೋಹಿತ್, ದ್ಯಾನೀಶ್ ಹಾಗೂ ತರುಣ್ ಎಂಬವರ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಅಂಗಡಿಯಲ್ಲಿ ಹಾಕಿರುವ ಹಾಡಿನಿಂದ ತಮ್ಮ ಧಾರ್ಮಿಕ ಕೇಂದ್ರದಲ್ಲಿ ಪ್ರಾರ್ಥನೆ ನಡೆಸಲು ತೊಂದರೆಯಾಗುತ್ತಿದೆ ಎಂಬ ಕಾರಣಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
WATCH VIDEO: ವಿಡಿಯೋ ಕಾಲ್ ಮಾಡಿ RCB ಆಟಗಾರ್ತಿಯರಿಗೆ ಶುಭಕೋರಿದ ವಿರಾಟ್ ಕೋಹ್ಲಿ, ವಿಡಿಯೋ ವೈರಲ್ !
ಭಾನುವಾರ ಸಂಜೆ 6.30 ಸುಮಾರಿಗೆ ಮುಖೇಶ್ ಅವರ ಅಂಗಡಿಗೆ ಬಂದ ಯುವಕರು, ನಮಗೆ ಪ್ರಾರ್ಥನೆ ಮಾಡಲು ತೊಂದರೆಯಾಗುತ್ತಿದೆ. ಕೂಡಲೇ ಸ್ಪೀಕರ್ನಲ್ಲಿ ಹಾಕಲಾಗಿದ್ದ ಹಾಡು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಈ ವಿಚಾರಕ್ಕೆ ಅಂಗಡಿ ಮಾಲೀಕನಿಗೂ ಯುವಕರಿಗೂ ಮಾತಿನ ಚಕಮಕಿ ನಡೆದಿದೆ.
ಚುನಾವಣಾ ಬಾಂಡ್ ಪ್ರಕರಣ:ಇಂದು ಎಸ್ಬಿಐನ ವಿಶಿಷ್ಟ ಸಂಖ್ಯೆಯ ಬಹಿರಂಗಪಡಿಸುವಿಕೆಯ ಬಗ್ಗೆ ಸುಪ್ರೀಂ ಕೋರ್ಟ್ ನಿರ್ಧಾರ
ನೋಡುನೋಡುತ್ತಿದ್ದಂತೆ ಗುಂಪಿನಲ್ಲಿದ್ದ ಓರ್ವ ಯುವಕ ಮುಖೇಶ್ ಮೇಲೆ ಹಲ್ಲೆ ಮಾಡಿದ್ದಾನೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಮುಖೇಶ್ ಅಂಗಡಿಯಿಂದ ಹೊರಬಂದಿದ್ದಾರೆ. ಮತ್ತೆ ಮಾಲೀಕನ ಮೇಲೆ ಯುವಕರು ಮನಬಂದಂತೆ ಹಲ್ಲೆ ಮಾಡಿದ್ದು, ತಮ್ಮ ಬಳಿಯಿದ್ದ ಚಾಕುವಿನಿಂದಲೂ ಚುಚ್ಚಿದ್ದಾರೆ.ಮುಖೇಶ್ ಮೇಲೆ ಹಲ್ಲೆ ಮಾಡಿರುವ ದೃಶ್ಯ ಅಂಗಡಿ ಹೊರಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ತನಿಖೆ ಕೈಗೊಂಡಿದ್ದಾರೆ.