ಬೆಂಗಳೂರು: ಸಾರಿಗೆ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಬೆಂಗಳೂರು, ಶಿವಗಂಗೆ, ಸಿದ್ಧಗಂಗಾ ಮಠ, ದೇವರಾಯನದುರ್ಗ, ಗೊರವನಹಳ್ಳಿ, ವಿಧುರಾಶ್ವರ, ಘಾಟಿ ಸುಬ್ರಹ್ಮಣ್ಯ ಮಾರ್ಗದಲ್ಲಿ ಕೆ ಎಸ್ ಆರ್ ಟಿ ಸಿ ಪ್ಯಾಕೇಜ್ ಟೂರ್ ಆರಂಭಿಸಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ “ಬೆಂಗಳೂರು-ಶಿವಗAಗೆ-ಸಿದ್ಧಗAಗಾ ಮಠ-ದೇವರಾಯನದುರ್ಗ-ಗೊರವನಹಳ್ಳಿ-ವಿಧುರಾಶ್ವಥ-ಘಾಟಿ ಸುಬ್ರಹ್ಮಣ್ಯ” ಮಾರ್ಗದಲ್ಲಿ ಅಶ್ವಮೇಧ ಕ್ಲಾಸಿಕ್ ಸಾರಿಗೆಯನ್ನು ವಾರಾಂತ್ಯದ ದಿನಗಳಲ್ಲಿ (ಪ್ರತಿ ಶನಿವಾರ ಮತ್ತು ಭಾನುವಾರ) ಪ್ಯಾಕೇಜ್ ಟೂರನ್ನು (ಪ್ರವೇಶ ಶುಲ್ಕ, ಉಪಹಾರ, ಮಧ್ಯಾಹ್ನದ/ರಾತ್ರಿ ಊಟವನ್ನು ಹೊರತುಪಡಿಸಿ) ದಿನಾಂಕ: 26-07-2025 ರಿಂದ ಪ್ರಾರಂಭಿಸಿ ಈ ಕೆಳಕಂಡ ವೇಳಾಪಟ್ಟಿಯಂತೆ ಪ್ರಾರಂಭಿಸಲಾಗುತ್ತದೆ.
ಸಾರ್ವಜನಿಕ ಪ್ರಯಾಣಿಕರು ಮೇಲೆ ತಿಳಿಸಿರುವ ಪ್ಯಾಕೇಜ್ ಟೂರ್ ಸಾರಿಗೆ ಸೌಲಭ್ಯಕ್ಕಾಗಿ ಟಿಕೇಟ್ ಪಡೆಯಲು ಉಪಯೋಗಿಸುವ ವೆಬ್ ಸೈಟ್: www.ksrtc.in & www.ksrtc.karnataka.gov.in ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ:080-26252625 /7760990100 /7760990560/ 7760990287.
‘ಸಮುದಾಯ ಬಾನುಲಿ ಕೇಂದ್ರ’ಗಳಿಗೆ ಆರ್ಥಿಕ ನೆರವಿಗಾಗಿ ಸಿಎಂಗೆ ‘KUWJ ಅಧ್ಯಕ್ಷ ಶಿವಾನಂದ ತಗಡೂರು’ ಮನವಿ
WATCH VIDEO: ಭೀಮನ ಅಮಾವಾಸ್ಯೆಯ ಪ್ರಯುಕ್ತ ಸಿಂಗದೂರು ಚೌಡೇಶ್ವರಿ ದೇವಿಗೆ ವಿಶೇಷ ಅಲಂಕಾರ: ಹರಿದು ಬಂದ ಭಕ್ತಸಾಗರ