ಬೆಂಗಳೂರು : ಚಿನ್ನಾಭರಣ ಅಂಗಡಿಯಲ್ಲಿ ಜನರು ಅವಶ್ಯಕತೆ ಬಿದ್ದಾಗ ತಮ್ಮ ಚಿನ್ನವನ್ನು ಅಡ ಬಿಟ್ಟು ಹಣ ಪಡೆದುಕೊಳ್ಳುತ್ತಾರೆ. ಆದರೆ ಬೆಂಗಳೂರಿನಲ್ಲಿ ಚಿನ್ನಾಭರಣ ಅಂಗಡಿ ಇಟ್ಟುಕೊಂಡಿದ್ದ ಸೇಟು ಒಬ್ಬ ಜನರು ಗಿರವಿ ಇಟ್ಟಿದ್ದ ಆಭರಣಗಳ ಜೊತೆ ಪರಾರಿಯಾಗಿರುವ ಘಟನೆ ಆನೇಕಲ್ ತಾಲೂಕಿನ ಕಾಚನಾಯಕನಹಳ್ಳಿಯಲ್ಲಿ ನಡೆದಿದೆ.
ಹೌದು ಗಿರವಿ ಅಂಗಡಿ ಮುಚ್ಚಿ ಇದೀಗ ಸೇಟು ಪರಾರಿಯಾಗಿದ್ದಾನೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಈ ಒಂದು ಗ್ರಾಮದಲ್ಲಿ ರಾಜಸ್ಥಾನ ಮೂಲದ ಮಾರ್ವಾಡಿ ಮುನಾರಾಮ್ ಪರಾರಿಯಾಗಿದ್ದಾನೆ. ಈತ ಆನಂದ ಜುವೆಲರ್ಸ್ ಮತ್ತು ಕೇಸರ ಬ್ಯಾಂಕರ್ಸ್ ಮಾಲೀಕ ಎಂದು ಹೇಳಲಾಗುತ್ತಿದ್ದು, ಕಳೆದ 10 ವರ್ಷದಿಂದ ಮುನಾರಾಮ್ ಗಿರವಿ ಅಂಗಡಿ ನಡೆಸುತ್ತಿದ್ದ.
ಈ ವೇಳೆ ಜನರು ಅಂಗಡಿಯಲ್ಲಿ ಚಿನ್ನಾಭರಣವನ್ನು ಅಡವಿಟ್ಟು ಹಣವನ್ನು ಪಡೆದಿದ್ದರು. ಸದ್ಯ ಲಕ್ಷಾಂತರ ರೂಪಾಯಿ ವಂಚನೆ ಮಾಡಿ ಸೇಟು ಪರಾರಿಯಾಗಿದ್ದಾನೆ. ಮನೆ ಖಾಲಿ ಮಾಡಿಕೊಂಡು ಚಿನ್ನಾಭರಣದ ಜೊತೆಗೆ ಸೇಟು ಪರಾರಿಯಾಗಿದ್ದಾನೆ. ನೂರಾರು ಜನರಿಗೆ ವಂಚಿಸಿ ಮುನಾರಾಮ್ ಪರಾರಿ ಆಗಿದ್ದಾನೆ ಹಾಗಾಗಿ ಚಿನ್ನಾಭರಣವನ್ನು ಗಿರವಿ ಇಟ್ಟಿದ್ದ ನೂರಾರು ಗ್ರಾಹಕರು ಠಾಣೆಗೆ ದೂರು ನೀಡಲು ಆಗಮಿಸಿದ್ದಾರೆ.