ಬೆಂಗಳೂರು: ಇಲ್ಲಿನ ಗ್ರಾಮಾಂತರ ಪ್ರದೇಶದಲ್ಲಿ ಹೆದ್ದಾರಿಯಲ್ಲಿ ದರೋಡೆ ಮಾಡುತ್ತಿದ್ದಂತ ರೌಡಿ ಶೀಟರ್ ಬಂಧಿಸಲು ತೆರಿದ್ದಂತ ವೇಳೆಯಲ್ಲಿ ಹಲ್ಲೆ ನಡೆಸಲು ಪರಾರಿಯಾಗಲು ಯತ್ನಿಸಿದ್ದಕ್ಕೆ ಪೊಲೀಸರು ಕಾಲಿಗೆ ಗುಂಡೇಟು ನೀಡಿ, ಬಂಧಿಸಿರುವುದಾಗಿ ತಿಳಿದು ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ದಬಾಸ್ ಪೇಟೆಯ ಬಳಿಯಲ್ಲಿ ರೌಡಿ ಶೀಟರ್ ಜಯಂತ್ ಎಂಬಾತ ಇದ್ದಂತ ಸ್ಥಳದ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಮಾಹಿತಿ ಆಧರಿಸಿ, ರೌಡಿ ಶೀಟರ್ ಜಯಂತ್ ಬಂಧಿಸೋದಕ್ಕೆ ಪೊಲೀಸರು ತೆರಳಿದ್ದಾರೆ.
ಈ ಸಂದರ್ಭದಲ್ಲಿ ಹೆಡ್ ಕಾನ್ ಸ್ಟೇಬಲ್ ಇಮ್ರಾನ್ ಖಾನ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಇನ್ಸ್ ಪೆಕ್ಟರ್ ರಾಜು ಅವರು ರೌಡಿ ಶೀಟರ್ ಜಯಂತ್ ಕಾಲಿಗೆ ಗುಂಡೇಟು ನೀಡಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿದ್ದಂತ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅಂದಹಾಗೇ ಬಂದಿತ ರೌಡಿ ಶೀಟರ್ ಜಯಂತ್ ಪಲ್ಸರ್ ಬೈಕ್ ನಲ್ಲಿ ಬಂದು ಹೆದ್ದಾರಿಯಲ್ಲಿ ಬೆದರಿಸಿ ಹಲವರನ್ನು ದರೋಡೆ ಮಾಡುತ್ತಿದ್ದನು. ಜಯಂತ್ ವಿರುದ್ಧ ಕೊಲೆ, ಕೊಲೆಯತ್ನ, ದರೋಡೆ ಸೇರಿದಂತೆ 56 ಕೇಸ್ ಗಳಿದ್ದಾವೆ. ಇಂತಹ ಆರೋಪಿಯನ್ನು ಪೊಲೀಸರು ಇಂದು ಕಾಲಿಗೆ ಗುಂಡೇಟು ನೀಡಿ, ಬಂಧಿಸಿದ್ದಾರೆ.
BREAKING: ‘ಸಿಎಂ ಸಿದ್ಧರಾಮಯ್ಯ’ಗೆ ಬಿಜೆಪಿ ಸರ್ಕಾರದ ಅವಧಿಯ ‘ಕೋವಿಡ್ ಹಗರಣ’ಗಳ ವರದಿ ಸಲ್ಲಿಸಿದ ‘ತನಿಖಾ ಆಯೋಗ’
ದಾವಣಗೆರೆಯಲ್ಲಿ ಜೈಲು ಶಿಕ್ಷೆಯ ಭಯದಿಂದ ‘ಕೋರ್ಟ್’ನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಆರೋಪಿ