ಬೆಂಗಳೂರು: ನಗರದ ಜನರಿಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಬಿಬಿಎಂಪಿ ಕ್ರಮವಹಿಸಿದೆ. ಈ ಆಪ್ ನಲ್ಲಿ ನೀರಿಗಾಗಿ ನೋಂದಾಯಿಸಿಕೊಂಡರೇ ಮನೆ ಬಾಗಿಲಿಗೇ ಕಾವೇರಿ ನೀರು ಸರಬರಾಜು ಮಾಡುವಂತ ವ್ಯವಸ್ಥೆಯನ್ನು ಮಾಡಲಾಗಿದೆ.
ಬೇಸಿಗೆ ಸಮಯದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ, ಟ್ಯಾಂಕರ್ ನೀರು ಪೂರೈಕೆ ಲಾಬಿಗೆ ಪರಿಹಾರವಾಗಿ ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ಜಲ ಮಂಡಳಿ (BWSSB) ವತಿಯಿಂದ ‘ಸಂಚಾರಿ ಕಾವೇರಿ’ – ಬೆಂಗಳೂರಿಗೆ ಶುದ್ಧ ಕುಡಿಯುವ ನೀರು! ಎಂಬ ವಿನೂತನವಾದ ಯೋಜನೆ ರೂಪಿಸಲಾಗಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶನಿವಾರ ಪರಿಶೀಲನೆ ನಡೆಸಿದರು.
ಆ್ಯಪ್ ಹೇಗೆ ಕಾರ್ಯ ನಿರ್ವಹಣೆ?
ಬೆಂಗಳೂರಿನ ಜನರು ಆಪ್ ನಲ್ಲಿ ನೀರಿನ ಬೇಡಿಕೆಗೆ ನೋಂದಾಯಿಸಿಬೇಕು. ಅದು ಜಲಮಂಡಳಿಯ ಕೇಂದ್ರಕ್ಕೆ ತಲುಪಿ, ಅಲ್ಲಿಂದ ಗ್ರಾಹಕರಿಗೆ ಹತ್ತಿರ ಇರುವ ಟ್ಯಾಂಕರ್ ಗೆ ಮಾಹಿತಿ ರವಾನೆಯಾಗುತ್ತದೆ. ಟ್ಯಾಂಕರ್ ನವರು ಕಾವೇರಿ ಸಂಪರ್ಕ ಕೇಂದ್ರಕ್ಕೆ ತೆರಳುತ್ತಾರೆ. ಆರ್ ಎಫ್ ಐ ಡಿ ಟ್ಯಾಗ್ ಸ್ಕ್ಯಾನ್ ಮಾಡಿ, ಕಾವೇರಿ ನೀರು ತುಂಬಿಸಿಕೊಂಡು ಗ್ರಾಹಕರ ವಿಳಾಸದತ್ತ ತೆರಳುತ್ತಾರೆ.
ಇನ್ನೂ ಆರ್ ಎಫ್ ಐಡಿಯಿಂದ ಗ್ರಾಹಕರಿಗೆ ಮತ್ತು ಜಲಮಂಡಳಿಗೆ ನೀರು ಪೂರೆಕೆಯ ಅಷ್ಟೂ ಮಾಹಿತಿಗಳು ಲಭ್ಯವಾಗುತ್ತದೆ.
ಕಾವೇರಿ ಶುದ್ಧ ಕುಡಿಯುವ ನೀರು ʼಸಂಚಾರಿ ಕಾವೇರಿʼ ಆ್ಯಪ್ ಮೂಲಕ ಬೆಂಗಳೂರಿಗರ ಮನೆ ಬಾಗಿಲಿಗೆ ಬರಲಿದೆ.#WaterForAll pic.twitter.com/MFSuV6U2Qk
— DIPR Karnataka (@KarnatakaVarthe) April 22, 2025
BIG NEWS: ಕೆರೆ ಒತ್ತುವರಿಯಾಗಿದ್ದರೇ ಮುಲಾಜಿಲ್ಲದೇ ತೆರವುಗೊಳಿಸಿ: ಸಿಎಂ ಸಿದ್ಧರಾಮಯ್ಯ ಖಡಕ್ ಸೂಚನೆ