ಬೆಂಗಳೂರು: ಶನಿವಾರ ಹೊರಬಿದ್ದ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ 2022ರ ಪಟ್ಟಿಯಲ್ಲಿನ 45 ನಗರಗಳಲ್ಲಿ ಬೆಂಗಳೂರು 43ನೇ ಪಡೆದುಕೊಂಡಿದೆ.
ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೆಂಗಳೂರು ರ್ಯಾಂಕಿಂಗ್ನಲ್ಲಿ 15ರಷ್ಟು ಕುಸಿತ ಕಂಡಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ವಿವಿಧ ಅಂಕಿ ಅಂಶಗಳನ್ನು ಆಧರಿಸಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ 45 ನಗರಗಳಲ್ಲಿ ಬೆಂಗಳೂರು 43ನೇ ಸ್ಥಾನ ಪಡೆದಿದೆ.
ಮಧ್ಯಪ್ರದೇಶದ ಇಂದೋರ್ ಸತತ ಆರನೇ ವರ್ಷ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಸೂರತ್ ಮತ್ತು ನವಿ ಮುಂಬೈ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಕೊನೆಯ ಎರಡು ಸ್ಥಾನದಲ್ಲಿರುವ ಚೆನ್ನೈ ಮತ್ತು ಮಧುರೈಗೆ ಹೋಲಿಸಿದರೆ ಬೆಂಗಳೂರು ಉತ್ತಮವಾಗಿದೆ. ರಾಜ್ಯಗಳ ಪೈಕಿ ಮಧ್ಯಪ್ರದೇಶ ದೇಶದಲ್ಲೇ ಅತ್ಯಂತ ಸ್ವಚ್ಛ ರಾಜ್ಯವಾಗಿದೆ.
ಈ ಪಟ್ಟಿಯಲ್ಲಿ ಮೈಸೂರು ಎಂಟನೇ ಸ್ಥಾನದಲ್ಲಿತ್ತು. ಬೆಂಗಳೂರಿನ ನಾಗರಿಕ ಆಡಳಿತ ಮಂಡಳಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಮೀಕ್ಷೆಗಾಗಿ ನಿವಾಸಿಗಳಿಂದ ಐದು ಲಕ್ಷಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ ಎಂದು ಹೇಳಲಾಗುತ್ತದೆ.
ಘನತ್ಯಾಜ್ಯ ನಿರ್ವಹಣೆಯ ಬಿಬಿಎಂಪಿ ವಿಶೇಷ ಆಯುಕ್ತ ಹರೀಶ್ ಕುಮಾರ್ ಮಾತನಾಡಿ, ಕಳೆದ ಬಾರಿ 10 ಸಾವಿರ ಜನರಿಂದ ಪ್ರತಿಕ್ರಿಯೆ ಪಡೆಯಲಾಗಿದ್ದು, ಈ ಬಾರಿ ಅದನ್ನು 5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಬೆಂಗಳೂರಿನಂತಹ ಬೃಹತ್ ನಗರವನ್ನು ಕೆಲವು ಸಣ್ಣ ನಗರಗಳೊಂದಿಗೆ ಹೋಲಿಸುವುದು ಸರಿಯಲ್ಲ. ಏಕೆಂದರೆ, ಅವುಗಳು ಎದುರಿಸುತ್ತಿರುವ ಸವಾಲುಗಳು ವಿಭಿನ್ನವಾಗಿವೆ ಎಂದಿದ್ದಾರೆ.
BIG NEWS: 8 ವರ್ಷಗಳ ನಂತ್ರ ತನ್ನ ಕಾರ್ಯನಿಲ್ಲಿಸಿದ ‘ಮಂಗಳಯಾನ’: ಇಸ್ರೋ ಮಾಹಿತಿ | Mangalyaan
BIGG NEWS : ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್ : ಪ್ರತಿ ಲೀಟರ್ ಹಾಲಿಗೆ 1 ರೂ. ಹೆಚ್ಚಳ