ಬೆಂಗಳೂರು : ಕಳೆದ ಮಾರ್ಚ್ 1 ರಂದು ಬೆಂಗಳೂರಿನ ಕುಂದಲಹಳ್ಳಿ ಬಳಿಯಿರುವ ರಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಸಂಭವಿಸಿದ ವಾರದ ಬಳಿಕ ಮತ್ತೆ ಗ್ರಾಹಕರಿಗೆ ತನ್ನ ಸೇವೆ ಒದಗಿಸಲು ನಗರದ ಐಟಿಪಿಎಲ್ ಮುಖ್ಯರಸ್ತೆ ಯಲ್ಲಿನ ರಾಮೇಶ್ವರಂ ಕೆಥೆ ಸಜ್ಜಾಗಿದ್ದು, ಶನಿವಾರದಿಂದ ದೈನಂದಿನ ವಹಿವಾಟು ಆರಂಭಿಸಲಿದೆ.
ರಂಜಾನ್ : ‘ಉರ್ದು ಶಾಲೆಗಳಲ್ಲಿ’ ಅರ್ಧ ದಿನ ಪಾಠ ಮಾಡಿ ಸಮಯ ಬದಲಾಯಿಸಿ : ಶಾಲಾ ಶಿಕ್ಷಣ ಇಲಾಖೆ ಆದೇಶ
ಶಿವರಾತ್ರಿ ಹಬ್ಬದ ಪ್ರಯುಕ್ತ ಶುಕ್ರವಾರ ರಾಮೇಶ್ವರ ಕೆಫೆಯಲ್ಲಿ ಹೋಮ, ಪೂಜಾ ಕೈಂಕರ್ಯಗಳು ಜರುಗಿದವು. ಸ್ಪೋಟ ದಿಂದಾಗಿ ಕಳೆದ ಒಂದು ವಾರದಿಂದ ಮುಚ್ಚಲ್ಪಟ್ಟಿದ್ದ ಕೆಫೆಯನ್ನು ಸಿಬ್ಬಂದಿ ತಳಿರು ತೋರಣಗಳಿಂದ ಅಲಂಕರಿಸಿದ ಬಳಿಕ ಪೂಜೆ ನಡೆಸಲಾಯಿತು. ಈ ವೇಳೆ ಸಂಸದ ಪಿ.ಸಿ. ಮೋಹನ್ ಸೇರಿದಂತೆ ಇತರರು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.
ಬೆಂಗಳೂರಿನ ರಾಮೇಶ್ವರಂ ಕೆಫೆ ಮರು ಆರಂಭದ ಪೂಜೆಯಲ್ಲಿ ಭಾಗವಹಿಸಿದ್ದ ಅತಿಥಿಗಳು. ಪೊಲೀಸ್ ಭದ್ರತೆಯಲ್ಲಿಯೇ ಪೂಜಾ ಕಾಠ್ಯಕ್ರಮಗಳು ನಡೆದವು.ಶನಿವಾರದಿಂದ ಕೆಫೆ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಮುಂಜಾನೆ ರಾಷ್ಟ್ರಗೀತೆ ಹಾಡುವ ಮೂಲಕ ಕೆಫೆ ಮರು ಆರಂಭಗೊಳ್ಳಲಿದೆ. ಬಾಂಬ್ ಸ್ಫೋಟದಿಂದಾಗಿ ಹಾಳಾಗಿದ್ದ ಕೆಫೆಯನ್ನು ಮರು ವಿನ್ಯಾಸಗೊಳಿಸಲಾಗಿದೆ.
ಪ್ರೇಮ ವೈಫಲ್ಯ : ಬೆಂಗಳೂರಲ್ಲಿ ‘ಪ್ರಿಯತಮೆ’ ಮನೆಯ ಎದುರೇ ‘ಚಾಕು’ ಇರಿದುಕೊಂಡು ಆಟೋ ಚಾಲಕ ‘ಆತ್ಮಹತ್ಯೆ’
ಅಲ್ಲದೇ, ಕೆಫೆಯ ಪ್ರವೇಶ ದ್ವಾರದಲ್ಲಿ ಎರಡು ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಲಾಗಿದೆ. ಪ್ರತಿಯೊಬ್ಬ ಗ್ರಾಹಕರನ್ನು ಹ್ಯಾಂಡ್‌ಹೆಲ್ತ್ ಡಿಟೆಕ್ಟರ್ ಮೂಲಕ ಪರೀಕ್ಷಿಸಿ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತದೆ. ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.ಸ್ಪೋಟದ ಬಳಿಕ ಕೆಫೆಯ ಸುತ್ತಲೂ ಬ್ಯಾರಿಕೇಡ್‌ಗಳನ್ನು ಅಳವಡಿಕೆ ಮಾಡಲಾ ಗಿತ್ತು. ಪೊಲೀಸರು ತನಿಖೆ ನಡೆಸಲುವ ಸಂಬಂಧ ಬ್ಯಾರಿಕೇಡ್ ಹಾಕಿ ಪ್ರವೇಶ ನಿರ್ಬಂಧಿಸಲಾಗಿತ್ತು. ಪೊಲೀಸರು, ಎನ್ ಐಎ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತಪಾ ಸಣೆ ನಡೆಸಿ ಮಾಹಿತಿಗಳನ್ನು ಕ್ರೋಢೀಕರಣ ಮಾಡಿದ್ದಾರೆ.