ಬೆಂಗಳೂರು : ಹೊರ ರಾಜ್ಯದಿಂದ ರಾಜಧಾನಿ ಬೆಂಗಳೂರಿಗೆ ರೈಲಿನಲ್ಲಿ ಗಾಂಜಾ ಸಾಗಿಸುತ್ತಿದ್ದ ರೈಲ್ವೆ ಹೊರ ಗುತ್ತಿಗೆ ನೌಕರನೊಬ್ಬನನ್ನು ಬೈಯಪ್ಪನಹಳ್ಳಿ ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ರೈಲ್ವೆ ಹೊರಗುತ್ತಿಗೆ ನೌಕರ ದೀಪಸ್ ದಾಸ್ ಎಂದ್ ಹೇಳಲಾಗುತ್ತಿದ್ದು, ಆರೋಪಿಯಿಂದ 32 ಲಕ್ಷ ರು ಮೌಲ್ಯದ 32.8 ಕೆಜಿ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ.ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಡ್ ರೋಲರ್ ಆಗಿದ್ದ. ಆ ರೈಲಿನ ಸಿಬ್ಬಂದಿ ಬೋಗಿಯ ಬೆಡ್ ಶೀಟ್‌ಗಳಡಿ ಗಾಂಜಾ ತುಂಬಿದ್ದ ಕಿಟ್ ಬ್ಯಾಗನ್ನು ಇಟ್ಟುಕೊಂಡು ತ್ರಿಪುರಾ ದಿಂದ ಬೆಂಗಳೂರಿಗೆ ತಂದಿದ್ದ.
ತ್ರಿಪುರಾದ ಆಗರ್ತಲಾದಿಂದ ಬೆಂಗಳೂರಿನ ಬೈಯಪ್ಪನಹಳ್ಳಿ ರೈಲ್ವೆ ಟರ್ಮಿನಲ್‌ಗೆ ಬಂದ ರೈಲ್ವೆನಲ್ಲಿ ಗಾಂಜಾ ಸಾಗಿಸುವ ಬಗ್ಗೆ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಆರೋಪಿಬಂಧಿತನಾಗಿದ್ದಾನೆ ಎಂದು ರೈಲ್ವೆ ಎಸ್ಪಿ ಡಾ.ಎಸ್.ಕೆ.ಸೌಮ್ಯಲತಾ ತಿಳಿಸಿದ್ದಾರೆ. ಕಳೆದೊಂದು ವರ್ಷದಿಂದ ಗುತ್ತಿಗೆ ಆಧಾರದಡಿ ಡಿ ರೈಲ್ವೆ ಇಲಾಖೆಯಲ್ಲಿ ಕೆಲಸಮಾಡುತ್ತಿದ್ದ.
ತ್ರಿಪುರಾದಲ್ಲಿ ಆತನಿಗೆ ಸುಮನ್ ಗಾಂಜಾ ಕೊಟ್ಟಿದ್ದು, ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾ ಣದಲ್ಲಿ ಬಿಸ್ವಜಿತ್‌ಗೆ ಗಾಂಜಾವನ್ನು ಆತ ತಲುಪಿಸಬೇಕಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದು ರೈಲಿನಲ್ಲಿ ಪರಿಶೀಲಿ ಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.ಈ ಕೃತ್ಯದಲ್ಲಿ ತಪ್ಪಿಸಿಕೊಂಡಿರುವ ಸುಮನ್ ಹಾಗೂ ಬಿಸ್ವಜಿತ್ ಪತ್ತೆಗೆ ತನಿಖೆ ಮುಂದುವೆರೆದಿದೆ.