ಬೆಂಗಳೂರು : ಪೊಲೀಸ್ ಇಲಾಖೆಗೆ ನಕಲಿ ದಾಖಲೆ ಪ್ರಮಾಣ ಪತ್ರ ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಬ್ಯಾಡರಹಳ್ಳಿ ಠಾಣೆಯ ಪಿಎಸ್ಐ ಕಾಶಿಲಿಂಗೇಗೌಡ ಸಸ್ಪೆಂಡ್ ಮಾಡಿ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಅವರು ಆದೇಶ ಹೊರಡಿಸಿದ್ದಾರೆ.
ನಕಲಿ ದಾಖಲೆ ನೀಡಿದ ಸಂಬಂಧ ವಿಧಾನಸೌಧ ಠಾಣೆಯಲ್ಲಿ PSI ಕಾಶಿಲಿಂಗೇಗೌಡನ ವಿರುದ್ಧ ಈ ಕುರಿತು ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಪಿಎಸ್ಐ ಜಾಮೀನು ಪಡೆದುಕೊಂಡಿದ್ದ ನಂತರ ಪೊಲೀಸ್ ಠಾಣೆಗೆ ಪಿಎಸ್ಐ ಕರ್ತವ್ಯಕ್ಕೆ ಹಾಜರಾಗಿದ್ದ, ಇದೀಗ ಪಿಎಸ್ಐ ಅಮಾನತು ಮಾಡಿ ಡಿಸಿಪಿ ಗಿರೀಶ್ ಆದೇಶ ಹೊರಡಿಸಿದ್ದಾರೆ.