ಬೆಂಗಳೂರು : ಹಾಲು ತರುತ್ತೇನೆಂದು ಮನೆಯಲ್ಲಿ ಹೇಳಿ ತೆರಳಿದ ಗರ್ಭಿಣಿಯೊಬ್ಬಳು ನಾಪತ್ತೆಯಾಗಿದ್ದು, ಪತ್ನಿಯನ್ನು ಒಂದು ಜಾಗ ಬಿಡದೆ ಹುಡುಕಾಡಿದ ಪ್ರತಿದಿನ ಪರದಾಡುತ್ತಿರುವ ಘಟನೆ ಬೆಂಗಳೂರು ನಗರದ ತಾವರೆಕೆರೆಯ ಕಾಮತ್ ಲೇಔಟ್ ನಲ್ಲಿ ನಡೆದಿದೆ.
ನಾಪತ್ತೆಯಾಗಿರೋ ಗರ್ಭಿಣಿಯನ್ನು ಶಾಲಿನಿ ಎಂದು ಹೇಳಲಾಗುತ್ತಿದ್ದು, ಪತ್ನಿಯನ್ನು ಪತಿ ಹುಡುಕಾಡುತ್ತಿದ್ದಾರೆ.ತಾವರೆಕೆರೆಯ ಕಾಮತ ಲೇಔಟ್ ನಲ್ಲಿ ದಂಪತಿ ವಾಸ ಮಾಡುತ್ತಿದ್ದರು ಎನ್ನಲಾಗುತ್ತಿದ್ದು, ನಿನ್ನೆ ಬೆಳಿಗ್ಗೆ ಆರು ಗಂಟೆಗೆ ಪತ್ನಿ ಹಾಲು ತರಲು ಹೋಗಿದ್ದಾಳೆ ಹಾಲಿಗೆ ರೂ.30 ತೆಗೆದುಕೊಂಡು ಶಾಲಿನಿ ಹೋಗಿದ್ದಾಳೆ.
ಬೆಳಗ್ಗೆ 8:00 ಆದರೂ ಪತ್ನಿ ಶಾಲಿನಿ ಮನೆಗೆ ಬಂದಿಲ್ಲ.ಗಾಬರಿಯದ ಪತಿ ಸ್ವಾಮಿಯಿಂದ ಹುಡುಕಾಟ ಆರಂಭಿಸಿದ್ದಾನೆ. ಆದರೆ ಶಾಲಿನಿ ಬಿಎಂಟಿಸಿ ಬಸ್ ಹತ್ತಿ ಹೋಗಿರುವುದು ಸಿಸಿಟಿವಿಯಲ್ಲಿ ಸೇರೆಯಾಗಿದೆ.ಮೆಜೆಸ್ಟಿಕ್ ಕೆಆರ್ ಮಾರ್ಕೆಟ್ ಬಳಿ ಪತ್ನಿಗಾಗಿ ಸ್ವಾಮಿ ಹುಡುಕಾಟ ನಡೆಸುತ್ತಿದ್ದಾನೆ. ಮಧ್ಯರಾತ್ರಿ ಆದರು ಪತ್ನಿ ಸಿಕ್ಕಿಲ್ಲ.
ಇದೇ ವೇಳೆ ಪತಿ ಮಾಧ್ಯಮಗಳೊಂದಿಗೆ ಮಾತನಾಡಿ ಬೆಳಿಗ್ಗೆ ಹೋದವಳು ಮತ್ತೆ ವಾಪಸ್ ಬಂದಿಲ್ಲ. ಯಾವ ಜಾಗವನ್ನು ಬಿಡದೆ ಪತ್ನಿಗಾಗಿ ಹುಡುಕಾಟ ನಡೆಸಿದ್ದೇನೆ, ಈ ಕುರಿತಂತೆ ಕಮಿಷನರ್ ಅವರಿಗೂ ದೂರು ನೀಡಿದ್ದು ಅವರು ಕೂಡ ಪತ್ನಿಯನ್ನು ಹುಡುಕಿಕೊಡುತ್ತೇವೆ ಎಂದು ತಿಳಿಸಿದ್ದಾರೆ ಎಂದು ಸ್ವಾಮಿ ಹೇಳಿದರು.