ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನಲ್ಲಿ ಮಸಾಜ್ ಪಾರ್ಲರ್ ಹೆಸರಿನಲ್ಲಿ ವಿದೇಶಿ ಯುವತಿಯನ್ನು ಕರೆಸಿಕೊಂಡು ವೇಶ್ಯವಾಟಿಕೆ ದಂದೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸರ ಎಷ್ಟೇ ಕಠಿಣ ಅಕ್ರಮ ಕೈಗೊಂಡರು ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ.
BREAKING : ಧಾರವಾಡದಲ್ಲಿ ‘ಹೃದಯ ವಿದ್ರಾವಕ’ ಘಟನೆ : ಇಬ್ಬರು ಮಕ್ಕಳನ್ನು ಕೊಲೆಗೈದು ತಾಯಿ ನೇಣಿಗೆ ಶರಣು
ಇದೀಗ ಅದೇ ರೀತಿಯಾಗಿ ಇಂದು ಬೆಂಗಳೂರಿನ ರೋರಾ ಥಾಯ್ ಸ್ಪಾ (ಮಸಾಜ್ ಪಾರ್ಲರ್) ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ನ್ಯೂ ಟೌನ್ ಪೊಲೀಸರು ದಾಳಿ ಮಾಡಿ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ವಶಪಡಿಸಿಕೊಂಡಿದ್ದು 7 ವಿದೇಶಿ ಯುವತಿಯರನ್ನು ರಕ್ಷಣೆ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
Shocking: ಚಾಲಕ ರಹಿತ ಸರಕು ರೈಲು ಕಥುವಾದಿಂದ ಪಠಾಣ್‌ಕೋಟ್‌ಗೆ ಪ್ರಯಾಣ | Watch Video
ರೋರಾ ಲಕ್ಸುರಿ ಥಾಯ್ ಸ್ಪಾ (ಮಸಾಜ್ ಪಾರ್ಲರ್) ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಆರೋಪಿಗಳು ಥೈಲ್ಯಾಂಡ್ ಸೇರಿದಂತೆ ವಿವಿಧ ದೇಶದ ಮಹಿಳೆಯರನ್ನು ಟೂರಿಸ್ಟ್ ವೀಸಾ ಹಾಗೂ ಬ್ಯುಸಿನೆಸ್ ವೀಸಾ ಮೂಲಕ ಬೆಂಗಳೂರಿಗೆ ಕರೆತಂದು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದರು.
ಖಚಿತ ಮಾಹಿತಿಯನ್ನು ಪಡೆದುಕೊಂಡ ಈ ವಿಚಾರ ತಿಳಿದ ಈಶಾನ್ಯ ವಿಭಾಗದ ಡಿಸಿಪಿ, ಯಲಹಂಕ ನ್ಯೂಟೌನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಪೊಲೀಸರು ದಾಳಿ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.