ಬೆಂಗಳೂರು: ಕಳವು ಮಾಡಿದಂತ ವಸ್ತುಗಳನ್ನು ರಿಕವರಿ ಮಾಡಿದ ನಂತ್ರ ಸಂಬಂಧ ಪಟ್ಟ ವಾರಸುದಾರರಿಗೆ ನೀಡಬೇಕಾಗಿದ್ದು ಪೊಲೀಸರ ಕರ್ತವ್ಯ. ಆದರೇ ಇಲ್ಲೊಬ್ಬ ಇನ್ಸ್ ಪೆಕ್ಟರ್ ಜಪ್ತಿ ಮಾಡಿದಂತ ವಸ್ತುಗಳನ್ನು ಮಾಲೀಕರಿಗೆ ಹಿಂದಿರುಗಿಸದೇ ದುರುಪಯೋಗ ಮಾಡಿಕೊಂಡಿದ್ದಾರೆ. ಈ ಕಾರಣದಿಂದಲೇ ಬೆಂಗಳೂರಲ್ಲಿ ಇನ್ಸ್ ಪೆಕ್ಟರ್ ಒಬ್ಬರ ವಿರುದ್ಧವೇ ಎಫ್ಐಆರ್ ದಾಖಲಾಗಿದೆ.
ಬೆಂಗಳೂರಿನ ಜೆಪಿ ನಗರದ ಠಾಣೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಈ ಹಿಂದೆ ಹಿತೇಂದ್ರ ಎಂ.ಎಸ್ ಎಂಬುವರು ಕರ್ತವ್ಯ ನಿರ್ವಹಿಸಿದ್ದರು. ಇಂತಹ ಪೊಲೀಸ್ ಇನ್ಸ್ ಪೆಕ್ಟರ್ ಕಳವು ಮಾಡಿದ್ದಂತ ಕೆಲ ವಸ್ತುಗಳನ್ನು ಜಪ್ತಿ ಮಾಡಿದ್ದರು. ಹೀಗೆ ಜಪ್ತಿ ಮಾಡಿದ್ದಂತ ವಸ್ತುಗಳನ್ನು ಹಿಂದಿರುಗಿಸಲೇ ದುರುಪಯೋಗ ಮಾಡಿಕೊಂಡಿದ್ದರು. ಈ ಕಾರಣದಿಂದ ವಾಪಾಸ್ ನೀಡುವಂತೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಜ್ಞಾಪನ ಪತ್ರವನ್ನು ನೀಡಿದ್ದರು.
ಡಿಸಿಪಿ ಜಪ್ತಿ ಮಾಡಿದ್ದಂತ ವಸ್ತುಗಳನ್ನು ಹಿಂದಿರುಗಿಸುವಂತೆ ಸೂಚಿಸಿದ್ದರೂ ಡೋಂಟ್ ಕೇರ್ ಎನ್ನುವಂತೆ ಪೊಲೀಸ್ ಇನ್ಸ್ ಪೆಕ್ಟರ್ ಹಿತೇಂದ್ರ ನಡೆದುಕೊಂಡಿದ್ದರು. ಈ ಹಿನ್ನಲೆಯಲ್ಲಿ ಜಪ್ತಿ ಮಾಡಿದ್ದ ವಸ್ತುಗಳನ್ನು ವಾಪಾಸ್ ಕೊಡದೇ ದುರುಪಯೋಗ ಮಾಡಿಕೊಂಡಂತ ಕಾರಣ, ಅವರ ವಿರುದ್ಧ ಜೆಪಿ ನಗರ ಠಾಣೆಯಲ್ಲೇ ಎಫ್ಐಆರ್ ದಾಖಲಾಗಿದೆ.