ಬೆಂಗಳೂರು : ಬೆಂಗಳೂರಿನಲ್ಲಿ ತಾಯಿಯೊಬ್ಬಳು ತನ್ನ ಮಗುವಿಗೆ ಚಿತ್ರಹಿಂಸೆ ನೀಡಿದ್ದಲ್ಲದೆ ಪ್ರತಿದಿನ ಹಲ್ಲೆ ನಡೆಸುತ್ತಿದ್ದಳು ಅಲ್ಲದೆ ತಾನು ಕೆಲಸಕ್ಕೆ ಹೋಗುವಾಗ ಮನೆಯಲ್ಲಿ ಕೂಡಿಹಾಕಿ ಅತ್ಯಂತ ಅನಾಗರಿಕತೆಯಿಂದ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಾಯಿ ಮತ್ತು ಆಕೆಯ ಪ್ರಿಯಕರನನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ನೀರಿನ ಸಮಸ್ಯೆ: 556 ಕೋಟಿ ರೂ.ಗಳ ‘ಕ್ರಿಯಾ ಯೋಜನೆ’ ಸಿದ್ಧಪಡಿಸಿದ ರಾಜ್ಯ ಸರ್ಕಾರ
ವೀರಭದ್ರನಗರ ನಿವಾಸಿ ಶಾರೀನ್ ಮತ್ತು ಆಕೆಯ ಪ್ರಿಯಕರ ದಿನೇಶ್ ಬಂಧಿತ. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ನಾಗರತ್ನ ಹಾಗೂ ರಾಜೇಶ್ವರಿ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಕೆಂಗೇರಿ-ಹೆಜ್ಜಾಲ’ ಕ್ರಾಸಿಂಗ್ ಕಾಮಗಾರಿ ಹಿನ್ನೆಲೆ : ಇಂದಿನಿಂದ ‘ಬೆಂಗಳೂರು-ಮೈಸೂರು’ ಕೆಲ ರೈಲು ರದ್ದು
ಗಂಡನಿಂದ ಪ್ರತ್ಯೇಕವಾಗಿರುವ ಶಾರೀನ್ ತನ್ನ 3.5 ವರ್ಷದ ಗುಂಡು ಮಗುವಿನ ಜತೆಗೆ ವೀರಭದ್ರನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದಳು. ಈಕೆಗೆ ದಿನೇಶ್ ಎಂಬ ಬಾಯ್‌ಫ್ರೆಂಡ್ ಇದ್ದಾನೆ. ಈಕೆ ಮಗುವನ್ನು ಮನೆಯಲ್ಲಿ ಒಂಟಿಯಾಗಿ ಕೂಡಿ ಹಾಕಿ ಹೊರ ಹೋಗುತ್ತಿದ್ದಳು.ಸಂಜೆ ಮನೆಗೆ ಬರುತ್ತಿದ್ದಳು.ಬಾಯ್ ಫ್ರೆಂಡ್ ಜತೆ ಸೇರಿಕೊಂಡು ಮಗುವಿಗೆ ಚಿತ್ರ ಹಿಂಸೆ ನೀಡುತ್ತಿದ್ದಳು.
ಮಗುವಿಗೆ ಕುಕ್ಕರ್ ನಿಂದ ಸಹ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿತ್ತು. ಮಗುವಿನ ಮರ್ಮಾಂಗ ಸೇರಿ ದೇಹದ ಹಲವೆಡೆ ಗಾಯದ ಗುರುತುಗಳಿವೆ. ಇದನ್ನು ಗಮನಿಸಿದ ಸ್ಥಳೀಯರು ಮಗುವನ್ನು ರಕ್ಷಿಸಿ, ಗಿರಿನಗರ ಠಾಣೆ ಪೊಲೀಸರ ಮುಖಾಂತರ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದರು.ಶಾರೀನ್ ಕಲ್ಯಾಣ ಸಮಿತಿ ಮಗುವನ್ನು ಮಾತನಾಡಿಸಿದಾಗ ತಾಯಿ ಮತ್ತು ಆಕೆಯ ಬಾಯ್ ಫ್ರೆಂಡ್ ನೀಡುತ್ತಿದ್ದ ಹಿಂಸೆ ಬಗ್ಗೆ ಹೇಳಿಕೊಂಡಿದೆ. ಈ ಹಿನ್ನೆಲೆ ಇಬ್ಬರು ಆರೋ ಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.