ಬೆಂಗಳೂರು : ಬೆಂಗಳೂರಿನ ಪಿಣ್ಯ ಫ್ಲೈ ಓವರ್ ನಲ್ಲಿ ಮತ್ತೆ ಸಂಚಾರ ಆರಂಭವಾಗಿದ್ದು, ಲೋಡ್ ಟೆಸ್ಟಿಂಗ್ ಹಿನ್ನೆಲೆಯಲ್ಲಿ ಪೀಣ್ಯ ಫ್ಲೈ ಓವರ್ ಕಳೆದ ಮೂರು ದಿನಗಳಿಂದ ಬಂದ್ ಆಗಿತ್ತು.ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ ಲೋಡ್ ಟೆಸ್ಟಿಂಗ್ ನಡೆಸಿತ್ತು.ಆದ್ದರಿಂದ ಲೋಡ ಟೆಸ್ಟಿಂಗ್ ಮುಕ್ತಾಯ ಹಿನ್ನೆಲೆ ಸಂಚಾರಕ್ಕೆ ಇದೀಗ ಅನುವು ಮಾಡಿಕೊಡಲಾಗಿದೆ. ಬೆಳಗ್ಗೆ 11 ಗಂಟೆಯಿಂದ ಮತ್ತೆ ವಾಹನಗಳ ಸಂಚಾರ ಆರಂಭವಾಗಲಿದೆ
ರಾಷ್ಟ್ರೀಯ ಹೆದ್ದಾರಿ-4 ರ ಪೀಣ್ಯ ಎಲಿವೇಟೆಡ್ ಹೈವೇಗೆ ಅಳವಡಿಸಿದ್ದ ವಯಾಡಕ್ಟ್ ದುರಸ್ಥಿ ಹಿನ್ನೆಲೆ ಲೋಡ್ ಟೆಸ್ಟಿಂಗ್ ನಡೆಸಲಿರುವ ಕಾರಣ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಿಂದ ನಾಗಸಂದ್ರದ ಪಾರ್ಲೆ ಜಿ ಫ್ಯಾಕ್ಟರಿವರೆಗೂ 5 ಕಿಮೀ ಉದ್ದವಿರು ಪೀಣ್ಯ ಮೇಲ್ಸೇತುವೆಯ ವಯಾಡಕ್ಟ್ನ ಸಮಗ್ರತೆ ಹಾಗೂ ಲೋಡ್ ಟೆಸ್ಟಿಂಗ್ ಪರಿಶೀಲನೆ ಸಂಚಾರಕ್ಕೆ ನಿರ್ಬಂಧ ಹೇರಲು ಮುಖ್ಯ ಕಾರಣವಾಗಿದೆ.
ಈ ಹಿಂದೆ ದುರಸ್ಥಿ ಸಂಬಂಧ ಐಐಎಸ್ಸಿ ತನಿಖೆ ಮಾಡಿ ರಾಷ್ಟ್ರೀಯ ಹೆದ್ದಾರಿಗೆ ಫ್ಲೈಓವರ್ ನಲ್ಲಿ ಲೋಪ ಇರುವ ಸಂಬಂಧ ರಿಪೋರ್ಟ್ ನೀಡಿದ್ದು. ಈ ಕಾರಣ ಸಮಸ್ಯೆ ಇದ್ದ ಸ್ಥಳದಲ್ಲಿ ಕೇಬಲ್ ಗಳ ಬದಲಾವಣೆ ಮಾಡಿದ್ದು, ಸದ್ಯ ಆ ಭಾಗಗಳಲ್ಲಿ ಲೋಡ್ ಟೆಸ್ಟಿಂಗ್ ಮಾಡಬೇಕಿರುವ ಕಾರಣ ಸದ್ಯ ಫ್ಲೈ ಓವರ್ ಬಂದ್ ಮಾಡಿ ಟೆಸ್ಟಿಂಗ್ ಗೆ ಎನ್ಎಚ್ಎಐ ಮುಂದಾಗಿತ್ತು.
ಜನವರಿ 16ರ ರಾತ್ರಿ 11 ಗಂಟೆಯಿಂದ ಜ.19ರ ಬೆಳಗ್ಗೆ 11ವರೆಗೆ ಬೆಂಗಳೂರಿನ ಪೀಣ್ಯ ಫ್ಲೈಓವರ್ ಬಂದ್ ಆಗಿತ್ತು, ಲೋಡ್ ಟೆಸ್ಟಿಂಗ್ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಪೀಣ್ಯ ಮೇಲ್ಸೇತುವೆ ಮೇಲೆ ವಾಹನ ಸಂಚಾರಕ್ಕೆ ನಿರ್ಬಂಧಿಸಿತ್ತು ಆದರೆ ಇದೀಗ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.