ಬೆಂಗಳೂರು: ಲೋಡ್ ಟೆಸ್ಟಿಂಗ್ (Load Testing) ಮಾಡುವ ಸಲುವಾಗಿ ಜನವರಿ 16ರಿಂದ ಮೂರು ದಿನಗಳ ಕಾಲ ಪೀಣ್ಯ ಫ್ಲೈಓವರ್ (Peenya Flyover) ಬಂದ್ ಆಗಲಿದೆ . ಜನವರಿ 16ರ ರಾತ್ರಿ 11 ಗಂಟೆಯಿಂದ ಜನವರಿ 19ರ ಬೆಳಗ್ಗೆ 11 ಗಂಟೆಯವರೆಗೆ ಈ ಫ್ಲೈಓವರ್ ಕ್ಲೋಸ್ ಆಗಲಿದೆ. ಈ ಹಿನ್ನೆಲೆ ಎಲ್ಲಾ ವಾಹನ ಸವಾರರು ಸರ್ವಿಸ್ ರಸ್ತೆ ಬಳಸುವಂತೆ ಮನವಿ ಮಾಡಿದ್ದಾರೆ.
ಪ್ರಯಾಣಿಕರು ನೆಲಮಂಗಲ ಕಡೆಯಿಂದ ಬೆಂಗಳೂರು ನಗರಕ್ಕೆ ಫೈ ಓವರ್ ರಸ್ತೆಯ ಮೂಲಕ ಸಾಗುವ ವಾಹನಗಳು ಕೆನ್ನಮೆಟಲ್ ಹತ್ತಿರ ಫೈಓವರ್ ಪಕ್ಕದ ಎನ್‍ಎಚ್-4 ಮತ್ತು ಸರ್ವಿಸ್ ರಸ್ತೆಯ ಮೂಲಕ 8ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆಯ ಜಂಕ್ಷನ್ ಮೂಲಕ ಎಸ್‍ಆರ್ ಎಸ್ ಜಂಕ್ಷನ್ ಮೂಲಕ ಗೊರಗುಂಟೆಪಾಳ್ಯ ತಲುಪಬಹುದಾಗಿದೆ.
ಸಿಎಂಟಿಐ ಜಂಕ್ಷನ್‍ನಿಂದ ನೆಲಮಂಗಲ ಕಡೆಗೆ ಫೈಓವರ್ ರಸ್ತೆಯಲ್ಲಿ ಸಾಗುವ ವಾಹನಗಳು ಪಾರ್ಲೆ-ಜಿ ಟೋಲ್ ತಲುಪಲು ಫೈ ಓವರ್ ಪಕ್ಕದ ಎನ್.ಎಚ್-4 ಸರ್ವಿಸ್ ರಸ್ತೆಯಲ್ಲಿ ಎಸ್‍ಆರ್ ಎಸ್ ಜಂಕ್ಷನ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ ಹಾಗೂ ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ- 8ನೇ ಮೈಲಿ ಮುಖಾಂತರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ನಗರ ಸಂಚಾರಿ ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Peenya Flyover will be closed from 11PM on 16/01/24 till 11AM on 19/01/24 for load testing. Commuters are requested to use the service road below the flyover.
ಲೋಡ್ ಪರೀಕ್ಷೆಗಾಗಿ ಪೀಣ್ಯ ಫ್ಲೈಓವರ್ ಮೇಲೆ ದಿ :16/01/24 ರಂದು ರಾತ್ರಿ 11 ಗಂಟೆಯಿಂದ 19/01/24 ರಂದು ಬೆಳಿಗ್ಗೆ 11 ಗಂಟೆಯವರೆಗೆ ಸಂಚಾರವನ್ನು… pic.twitter.com/PQZZqeDqK1— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) January 9, 2024