ಬೆಂಗಳೂರು: ಇಂದು ಕಾಮಾಕ್ಷಿಪಾಳ್ಯದಲ್ಲಿ ಪಾದಚಾರಿಯೊಬ್ಬನಿಗೆ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಸಾವನ್ನಪ್ಪಿದ ಪ್ರಕರಣ ನಡೆದಿತ್ತು. ಆದ್ರೇ ಆತ ತಾನಾಗಿಯೇ ಬಸ್ ಅಡಿ ಬಿದ್ದು, ಸಾವನ್ನಪ್ಪಿರುವ ಆಘಾತಕಾರಿ ವೀಡಿಯೋವನ್ನು ಬಿಎಂಟಿಸಿ ಬಿಡುಗಡೆ ಮಾಡಿ, ಸ್ಪಷ್ಟನೆ ನೀಡಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ 14.03.2024 ರಂದು ಘಟಕ 31ರ ವಾಹನ ಸಂಖ್ಯೆ KA 57 F583, ಅನುಸೂಚಿ ಸಂಖ್ಯೆ 242ಬಿ/10 ರಲ್ಲಿ ಕೆಂಪೇಗೌಡ ಬಸ್ ನಿಲ್ದಾಣದಿಂದ ಜನಪ್ರಿಯ ಅಪಾರ್ಟ್ಮೆಂಟ್ಗೆ ಸುತ್ತುವಳಿ ಮಾಡುತ್ತಿರುವಾಗ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಿಂದ ಸ್ವಲ್ಪ ಮುಂದೆ ಸಂಸ್ಥೆಯ ವಾಹನ ಚಲಿಸುತ್ತಿರುವಾಗ ಪಾದಚಾರಿ, ಚೇತನ್, 34 ವರ್ಷ, ರವರು ತಾವಾಗೆ ಓಡಿ ಬಂದು ರಸ್ತೆಗೆ ಬಿದ್ದಿರುತ್ತಾರೆ ಎಂದು ತಿಳಿಸಿದೆ.
ಇದನ್ನು ಗಮನಿಸಿದ ನಮ್ಮ ಚಾಲಕರು ತತಕ್ಷಣವೆ ಬ್ರೇಕ್ ಹಾಕಿ ಬಸ್ಸನ್ನು ನಿಲ್ಲಿಸಲು ಪ್ರಯತ್ನಿಸಿದರೂ ಸಹಿತ, ಪಾದಾಚಾರಿ ಬಸ್ಸಿನ ಎಡ ಮಧ್ಯೆ ಭಾಗದಲ್ಲಿ ಬಂದ ಕಾರಣ, ಬಸ್ಸಿನ ಹಿಂದಿನ ಚಕ್ರವು ಪಾದಚಾರಿಯ ಎಡಗೈಗೆ ಮತ್ತು ಎಡಗಾಲಿನ ಪಾದಕ್ಕೆ ತಾಗಿ ತೀವ್ರ ಸ್ವರೂಪದ ರಕ್ತ ಗಾಯವಾಗಿದ್ದು, ತಕ್ಷಣವೇ ಬಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿರುತ್ತದೆ. ಚಿಕಿತ್ಸೆ ಫಲಕಾರಿಯಾಗದೆ ಶ್ರೀಯುತರು ಮಧ್ಯ ರಾತ್ರಿ 12.30 ಕ್ಕೆ ಪ್ರಾಣ ಬಿಟ್ಟಿರುವುದಾಗಿ ತಿಳಿದು ಬಂದಿರುತ್ತದೆ ಎಂದು ಹೇಳಿದೆ.
ವಾಹನವನ್ನು ಕಾಮಾಕ್ಷಿಪಾಳ್ಯ ಸಂಚಾvರ ಪೊಲೀಸ್ ಠಾಣೆಯ ಬಳಿಗೆ ತೆಗೆದುಕೊಂಡು ಹೋಗಿದ್ದು, ಅಪಘಾತ ಶಾಖೆಯವರು ಪ್ರಕರಣವನ್ನು ನಿರ್ವಹಿಸುತ್ತಿರುವರು.
ಸಂಸ್ಥೆಯ ವಾಹನದಲ್ಲಿ ಅಳವಡಿಸಿರುವ ಸಿಸಿಟಿವಿಯ ಪೂಟೇಜ್ ನಿಂದ ಈ ಎಲ್ಲಾ ಮಾಹಿತಿ ಸ್ಪಷ್ಟವಾಗಿ ತಿಳಿದು ಬಂದಿದೆ ಎಂದಿದೆ.
ಗಮನಿಸಿ: ಬೆಂಗಳೂರಲ್ಲಿ ‘ಕೆರೆ ಮಿತ್ರ’ರಾಗಿ ನೋಂದಾಯಿಸಿಕೊಳ್ಳುವ ಅವಧಿ ವಿಸ್ತರಣೆ
ಬಿಹಾರ ಸಚಿವ ಸಂಪುಟ ವಿಸ್ತರಣೆ : ಮಾಜಿ ಡಿಸಿಎಂ ‘ರೇಣು ದೇವಿ ಸೇರಿ 21 ನಾಯಕ’ರು ‘ನಿತೀಶ್ ಕುಮಾರ್’ ಪಡೆಗೆ ಸೇರ್ಪಡೆ