ಬೆಂಗಳೂರು : ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಪ್ರಯಾಣಿಕರು ಒಬ್ಬರು ತೀವ್ರ ಹೃದಯಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಕೃಷ್ಣ (60) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ 11 ಗಂಟೆಯ ಸುಮಾರಿಗೆ ಮೆಜೆಸ್ಟಿಕ್ ಬಸ್ ತಂಗುದಾಣದಲ್ಲಿ ಬಸ್ ಹತ್ತಿದ್ದ ಕೃಷ್ಣ, ನಂತರ ಬಸ್ ನವರಂಗ ಕಡೆಗೆ ಹೋಗುತ್ತಿದ್ದ ವೇಳೆ ಅವರಿಗೆ ತೀವ್ರ ಅರ್ಧವಾಗಿದೆ ತಕ್ಷಣ ಅವರು ಬಸ್ಸಿನಲ್ಲೇ ಕುಸಿದು ಬಿದ್ದಿದ್ದಾರೆ.
ಈ ವೇಳೆ ತಕ್ಷಣ ಸಹ ಪ್ರಯಾಣಿಕರು ಅವರ ಕುಸಿದು ಬಿದ್ದಿದ್ದನ್ನು ಕಂಡು ಗಾಬರಿಯಾಗಿದ್ದು ಬಸ್ ನಿಲ್ಲಿಸಲು ತಿಳಿಸಿದ್ದಾರೆ.ಬಸ್ ಸೀಟ್‌ನಲ್ಲಿ ಕುಳಿತ ಹದಿನೈದು ನಿಮಿಷದಲ್ಲೇ ಕೃಷ್ಣ ಅವರಿಗೆ ಹೃದಯಾಘಾತವಾಗಿದೆ ಎಂದು ತಿಳಿದುಬಂದಿದೆ.
BIG NEWS : ಅಶ್ಲೀಲ ಪದಗಳಿಂದ ಸಚಿವ ಶಿವರಾಜ್ ತಂಗಡಗಿಗೆ ನಿಂದನೆ ಆರೋಪ : ಸಿಟಿ ರವಿ ವಿರುದ್ಧ ದೂರು ದಾಖಲು
ಬಸ್ನಲ್ಲಿ ಕೇವಲ 15 ನಿಮಿಷಗಳಲ್ಲಿ ಅವರಿಗೆ ಹೃದಯಾಘಾತ ವಾಗಿದ್ದರಿಂದ ನವರಂಗ ಸಮೀಪ ಇರುವ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತು. ಆದರೆ ವೈದ್ಯರು ಈಗಾಗಲೇ ಅವರು ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ. ಮೃತಪಟ್ಟ ವ್ಯಕ್ತಿ ಕೃಷ್ಣ ಕುರಿತು ಇದೀಗ ಪೊಲೀಸರು ಯಾವ ಊರಿನವರು ಎಂದು ತನಿಖೆ ನಡೆಸುತ್ತಿದ್ದಾರೆ.