ಬೆಂಗಳೂರು: ನಗರದ ಕೇಂದ್ರ ಭಾಗದಲ್ಲಿರುವಂತ ಕಬ್ಬನ್ ಪಾರ್ಕ್ ನಲ್ಲಿ ಪ್ರತಿ ಭಾನುವಾರ ಮತ್ತು ಹೈಕೋರ್ಟ್ ಕಾರ್ಯನಿರ್ವಹಿಸದೇ ಇರುವಂತ ದಿನಗಳಲ್ಲಿ ನಿರ್ಧಿಷ್ಟ ಪ್ರದೇಶದಲ್ಲಿ ವಾಹನಗಳ ಪಾರ್ಕಿಂಗ್ ಗೆ ಅವಕಾಶ ಕಲ್ಪಿಸಿದೆ.
ಕಬ್ಬನ್ ಉದ್ಯಾನಕ್ಕೆ ಭೇಟಿ ನೀಡುವ ಸಾರ್ವಜನಿಕರಿಗೆ ಪ್ರತಿ ಭಾನುವಾರ ಹಾಗೂ ಹೈಕೋರ್ಟ್ ಕಾರ್ಯನಿರ್ವಹಿಸದೇ ಇರುವ ಶನಿವಾರದಂದು ಹಳೆಯ ಕೆಜಿಐಡಿ ಕಟ್ಟಡದ ಪಕ್ಕದಲ್ಲಿರುವ ಪಾರ್ಕಿಂಗ್ ಪ್ರದೇಶದಲ್ಲಿ ಬೆಳಗ್ಗೆ 6 ರಿಂದ ಸಂಜೆ 6.30ರ ವರೆಗೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. #CubbonPark pic.twitter.com/ON2GsuFNpB
— DIPR Karnataka (@KarnatakaVarthe) April 18, 2025
ಈ ಕುರಿತಂತೆ ಬೆಂಗಳೂರು ಸಂಚಾರ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕಬ್ಬನ್ ಪಾರ್ಕ್‌ಗೆ ಭೇಟಿ ನೀಡುವ ಸಾರ್ವಜನಿಕರು ಪ್ರತಿ ಭಾನುವಾರದಂದು ಹಾಗೂ ಹೈಕೋರ್ಟ್ ಕಾರ್ಯನಿರ್ವಹಿಸದೇ ಇರುವ ಶನಿವಾರಗಳಂದು ಹಳೆಯ ಕೆಜಿಐಡಿ ಕಟ್ಟಡದ ಪಕ್ಕದಲ್ಲಿರುವ ಪಾರ್ಕಿಂಗ್ ಪ್ರದೇಶದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದಿದೆ.
ಕಬ್ಬನ್ ಪಾರ್ಕ್‌ನ ಇತರ ಪಾರ್ಕಿಂಗ್ ಪ್ರದೇಶಗಳಿಗೆ ಅಸ್ತಿತ್ವದಲ್ಲಿರುವ ದರಗಳ ಪುಕಾರ ಪಾವತಿ ಆಧಾರದ ಮೇಲೆ ವಾಹನಗಳನ್ನು ಪಾರ್ಕಿಂಗ್ ಮಾಡಬಹುದಾಗಿದ್ದು, ಈ ಪಾರ್ಕಿಂಗ್ ಪ್ರದೇಶವು ಬೆಳಿಗ್ಗೆ 06:00 ರಿಂದ ಸಂಜೆ 06:30 ರವರೆಗೆ ವಾಹನಗಳನ್ನು ಪಾರ್ಕಿಂಗ್ ಮಾಡಲು ಮುಕ್ತವಾಗಿರುತ್ತದೆ ಎಂದು ಹೇಳಿದೆ.
ಕಬ್ಬನ್ ಉದ್ಯಾನವನಕ್ಕೆ ಭೇಟಿ ನೀಡುವವರು ಈ ಸೌಲಭ್ಯವನ್ನು ಪಡೆದುಕೊಳ್ಳಲು ಪ್ರೋತ್ಸಾಹಿಸುತ್ತಾ, ಕಬ್ಬನ್ ಉದ್ಯಾನವನಕ್ಕೆ ಹೋಗುವ ರಸ್ತೆಗಳಲ್ಲಿ ವಾಹನ ನಿಲುಗಡೆ ಮಾಡುವುದನ್ನು ತಪ್ಪಿಸಲು ಕೋರಿದ್ದಾರೆ.
ಬೆಲೆ ಏರಿಕೆಯೇ ರಾಜ್ಯ ಸರಕಾರದ ಅಭೂತಪೂರ್ವ ಕೊಡುಗೆ: MLC ಎನ್.ರವಿಕುಮಾರ್