ಬೆಂಗಳೂರು : ಬೆಂಗಳೂರಿನಲ್ಲಿ ನೂರಕ್ಕೂ ಹೆಚ್ಚು ಶಾಲಾ ವಾಹನಗಳನ್ನು ಇದೀಗ RTO ಅಧಿಕಾರಿಗಳು ಸೀಜ್ ಮಾಡಿದ್ದಾರೆ.ಖಾಸಗಿ ವಾಹನಗಳಿಗೆ ಬಿಸಿ ಮುಟ್ಟಿಸಿದ ಆರ್‌ಟಿಓ ಅಧಿಕಾರಿಗಳು ಬೆಂಗಳೂರಿನ ಪ್ರಮುಖ ಶಾಲಾ ಕಾಲೇಜು ವಾಹನಗಳನ್ನು ಇದೀಗ ಸೀಜ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಆರ್‌ಟಿಓ ಅಧಿಕಾರಿಗಳಿಂದ ಈ ಒಂದು ಭರ್ಜರಿ ಕಾರ್ಯಾಚರಣೆ ನಡೆದಿದೆ. ಮಕ್ಕಳನ್ನು ಚಾಲಕರು ಬೇಕಾಬಿಟ್ಟಿಯಾಗಿ ಕೂಡಿಸಿಕೊಂಡು ಹೋಗುತ್ತಿದ್ದರು. ವಾಹನಗಳ ಪರವಾನಿಗೆ ಚಾಲಕರು ಡಿಎಲ್ ಇಲ್ಲದೆ ಸಂಚರಿಸುತ್ತಿದ್ದರು. ನಿಯಮ ಪಾಲಿಸದ ಶಾಲಾ ವಾಹನಗಳನ್ನು ಆರ್ ಟಿ ಓ ಅಧಿಕಾರಿಗಳು ಇದೀಗ ಸೀಜ್ ಮಾಡಿದ್ದಾರೆ.
ಶಾಲಾ ವಾಹನಗಳು ಶಾಲೆಯ ಹೆಸರಿನಲ್ಲಿ ನೋಂದಣಿ ಆಗಿರಬೇಕು ಆದರೆ ಸಾಕಷ್ಟು ವಾಹನಗಳು ಯಾರದೋ ಹೆಸರಿನಲ್ಲಿ ನೋಂದಣಿ ಆಗಿವೆ. ಹಾಗಾಗಿ ಆರ್ ಟಿ ಓ ಅಧಿಕಾರಿಗಳು ಇದೀಗ ನೂರಕ್ಕೂ ಹೆಚ್ಚು ಶಾಲಾ ವಾಹನಗಳನ್ನು ಸೀಸ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.