ಬೆಂಗಳೂರು : ಮಹಿಳೆ ಹಾಗೂ ಮಗನನ್ನು ಅಪಹರಿಸಿ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಬೆಂಗಳೂರಿನ ಚಂದ್ರಾ ಲೇಔಟ್ ಠಾಣೆಯ ಪೊಲೀಸರು ಇಬ್ಬರು ರೌಡಿಶೀಟರ್ ಗಳು ಸೇರಿದಂತೆ ಒಂಬತ್ತು ಜನರನ್ನು ಬಂಧಿಸಿದ್ದಾರೆ.
ಹೌದು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಚಂದ್ರಾ ಲೇಔಟ್ ಪೊಲೀಸರು 9 ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ಬರು ರೌಡಿ ಶೀಟರ್ ಗಳು ಸೇರಿ 9 ಆರೋಪಿಗಳನ್ನು ಬಂಧಿಸಿದ್ದಾರೆ. ರೌಡಿಶೀಟರ್ ಗಳಾದ ಜೋಸೆಫ್, ಶ್ರೀನಿವಾಸ್ ಅಲಿಯಾಸ್ ಪಾಗಲ್ ಸೀನ, ಸೌಮ್ಯ, ಪ್ರತಾಪ್, ಜತಿನ್ ವಿಜ್ಞೇಶ್, ಸೈಯದ್ ಶಹಬುದ್ದೀನ್, ಸ್ವಾತಿ, ಮಾದೇಶನನ್ನು ಚಂದ್ರ ಲೇಔಟ್ ಠಾಣೆಯ ಪೊಲೀಸರು ಇದೀಗ ಬಂಧಿಸಿದ್ದಾರೆ.
ಕಳ್ಳತನ ಪ್ರಕರಣದಲ್ಲಿ ತಾಯಿ ಮಗ ಬಂಧಿಯಾಗಿದ್ದರು. ಈ ಬಗ್ಗೆ ತಿಳಿದುಕೊಂಡು ಗೊತ್ತಿದ್ದವರಿಂದಲೇ ತಾಯಿ ಮಗನನ್ನು ಅಪಹರಿಸಲಾಗಿದೆ.ಕಳ್ಳತನ ಮಾಡಿರುವ ಹಣ ನೀಡುವಂತೆ ತಾಯಿ ಮಗನಿಗೆ ಬೆದರಿಕೆ ಹಾಕಿದ್ದಾರೆ. ಹಣ ನೀಡದಿದ್ದರಿಂದ ಈ ವೇಳೆ ಆರೋಪಿಗಳು ತಾಯಿ ಮಗನನ್ನು ಅಪಹರಿಸಿದ್ದಾರೆ. ಆಗಸ್ಟ್ 13ರಂದು ರೌಡಿಶೀಟರ್ ಗಳು ತಾಯಿ ಮಗನನ್ನು ಅಪಹರಿಸಿದ್ದಾರೆ.
ಇಬ್ಬರನ್ನು ಪರಿಚಯಸ್ಥ ಪ್ರತಾಪ್ ಎನ್ನುವವರ ಮನೆಯಲ್ಲಿ ಅಕ್ರಮವಾಗಿ ಇರಿಸಿ ಕಿರುಕುಳ ನೀಡಿದ್ದಾರೆ. ಕೂಡಿಹಾಕಿ ದೈಹಿಕ ಹಾಗೂ ಲೈಂಗಿಕ ದೌರ್ಜನ್ಯವ್ಯಸಗಿದ್ದಾರೆ. ಎರಡು ಲಕ್ಷ ಹಣ ಕೊಡುವಂತೆ ತಾಯಿ ಮಗನಿಗೆ ಕಿರುಕುಳ ನೀಡಿದ್ದಾರೆ. ಹಣ ಇಲ್ಲವೆಂದು ಗೊತ್ತಾದಾಗ ಆರೋಪಿಗಳು ತಾಯಿ ಮಗನನ್ನು ಬಿಟ್ಟು ಕಳುಹಿಸಿದ್ದರು. ಈ ಸಂಬಂಧ ಮಹಿಳೆ ಚಂದ್ರಾ ಲೇಔಟ್ ಠಾಣೆಗೆ ದೂರು ನೀಡಿದ್ದಳು. ಸದ್ಯ ಮಹಿಳೆ ದೂರಿನ ಮೇರೆಗೆ 9 ಆರೋಪಿಗಳನ್ನು ಬಂಧಿಸಿದ್ದಾರೆ.